ಉಳ್ಳಾಲ ಉರೂಸ್ ಗೆ ಸಹಕಾರ: ದರ್ಗಾ ಆಡಳಿತದಿಂದ ಡಿಸಿಎಂಗೆ ಕೃತಜ್ಞತೆ
Update: 2025-05-21 12:56 IST
ಉಳ್ಳಾಲ: ಇತ್ತೀಚೆಗೆ ಮುಕ್ತಾಯಗೊಂಡ ಉಳ್ಳಾಲ ದರ್ಗಾ ಉರೂಸ್ ಸಮಾರಂಭಕ್ಕೆ ಸಹಕಾರ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದರ್ಗಾ ಆಡಳಿತ ಸಮಿತಿಯು ಭೇಟಿ ಕೃತಜ್ಞತೆ ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಹಾಗೂ ಕಾರ್ಯದರ್ಶಿ ಇಸಾಕ್ ಮೇಲಂಗಡಿ ಮೇಲಂಗಡಿಯವರು ಡಿಸಿಎಂ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಹೂಗುಚ್ಚ ನೀಡಿ ಕೃತಜ್ಞತೆ ಸಲ್ಲಿಸಿದರು.