×
Ad

ಸಮಸ್ತ ಮದರಸ ಮ್ಯಾನೇಜ್‌ಮೆಂಟ್ ಅಸೋಶಿಯೇಶನ್ ಸೂರಲ್ಪಾಡಿ ರೇಂಜ್ ರಚನೆ

Update: 2025-06-03 18:12 IST

ಮಂಗಳೂರು: ಸಮಸ್ತ ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ದ.ಕ ಜಿಲ್ಲೆ ಇದರ ಅಧೀನದಲ್ಲಿ ನೂತನವಾಗಿ ಸೂರಲ್ಪಾಡಿ ರೇಂಜ್ ಅಸ್ತಿತ್ವಕ್ಕೆ ಬಂದಿದೆ.

ಸೂರಲ್ಪಾಡಿ ಇಕ್ರಾ ಇಸ್ಲಾಮಿಕ್ ಸ್ಕೂಲ್ ಸಭಾಂಗಣದಲ್ಲಿ ಜಿಲ್ಲಾ ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಅಧ್ಯಕ್ಷ ಎಮ್.ಎಚ್.ಮೊಹಿದೀನ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗುರುಪುರ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ನಝೀರ್ ಅಝ್ಹರಿ ಉಸ್ತಾದ್ ಸಭೆಗೆ ಚಾಲನೆ ನೀಡಿದರು.

ದ.ಕ.ಜಿಲ್ಲಾ ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ಅವರು ಸಮಿತಿ ರಚನೆಗೆ ಮಾರ್ಗದರ್ಶನ ನೀಡಿದರು.

ಜಿಲ್ಲಾ ಮದರಸ ಮ್ಯಾನೇಜ್‌ಮೆಂಟ್‌ನ ಪತ್ರಿಕಾ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಚುನಾವಣಾ ವೀಕ್ಷಕರಾಗಿದ್ದರು.

ಸಭೆಯಲ್ಲಿ ಜಿಲ್ಲಾ ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಉಪಾಧ್ಯಕ್ಷರುಗಳಾದ ಮೆಟ್ರೋ ಸಾಹುಲ್ ಹಮೀದ್ ಹಾಜಿ, ಮಯ್ಯದ್ದಿ ಗುಂಡುಕಲ್, ಎಸ್.ಹಸನಬ್ಬ ಗುಡ್ಡೆಮನೆ ಮತ್ತು ಸೂರಲ್ಪಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಸೂರಲ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸೂರಲ್ಪಾಡಿ ರೇಂಜ್ 18 ಮದರಸ ಸಮಿತಿಗಳನ್ನು ಒಳಗೊಂಡಿರುತ್ತದೆ.

ಪದಾಧಿಕಾರಿಗಳ ವಿವರ: ಇಬ್ರಾಹೀಂ ಸಾಗರ್ ಸೂರಲ್ಪಾಡಿ (ಅಧ್ಯಕ್ಷ), ಶೇಕಬ್ಬ ಅಸ್ರಾರ್ ನಗರ ಮತ್ತು ಮುಹಮ್ಮದ್ ರಫೀಕ್ ಯು.ಪಿ. ಕುಪ್ಪೆಪದವು(ಉಪಾಧ್ಯಕ್ಷರು), ಮುಹಮ್ಮದ್ ಸಾದೀಕ್ ಗಂಜಿಮಠ (ಪ್ರಧಾನ ಕಾರ್ಯದರ್ಶಿ), ಅಬ್ದುಲ್ ಖಾದರ್ ಸೂರಲ್ಪಾಡಿ (ಕೋಶಾಧಿಕಾರಿಯಾಗಿ), ಅಶ್ರಫ್ ಪದರಂಗಿ (ಜತೆ ಕಾರ್ಯದರ್ಶಿ), ಅಬ್ದುಲ್ ಖಾದರ್ ನಾರ್ಲಪದವು ಮತ್ತು ಅಬ್ದುಲ್ ಶಾಕೀರ್ ಕುಪ್ಪೆಪದವು (ಜಿಲ್ಲಾ ಕೌನ್ಸಿಲರ್) ಬಶೀರ್ ಫ್ಲವರ್, ಅಬೂಬಕ್ಕರ್ ಮಳಲಿ, ಶೇಖ್ ಅಬ್ದುಲ್ಲಾ, ಅನ್ವರ್ ಸಾದತ್, ಅಬ್ದುಲ್ ಮಜೀದ್, ಹನೀಫ್.ಕೆ, ಎಸ್.ಎಮ್.ಸಿರಾಜ್, ಬಿ.ಎಸ್.ಶರೀಫ್, ರಫೀಕ್ ದರ್ಬಾರ್, ಅಬ್ದುಲ್ ರಝಾಕ್, ಅಬ್ದುಲ್ ಹಮೀದ್ ಕಟ್ಟಪುಣಿ ಮತ್ತು ಮುಹಮ್ಮದ್ ಮುಷ್ತಾಖ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವುದಾಗಿ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪತ್ರಿಕಾ ಕಾರ್ಯ ದರ್ಶಿಗಳಾದ ಇಬ್ರಾಹೀಂ ಕೊಣಾಜೆ ಮತ್ತು ರಿಯಾಝ್ ಹಾಜಿ ಬಂದರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News