×
Ad

ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪ್ರವಾಸ

Update: 2025-06-03 19:10 IST

ಮಂಗಳೂರು, ಜೂ.3: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೂ.4 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12:15ಕ್ಕೆ ಮೂಡುಬಿದಿರೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ, 12:35ಕ್ಕೆ ಕಿನ್ನಿಗೋಳಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ, 1:30ಕ್ಕೆ ಕಿನ್ನಿಗೋಳಿ ರಾಜಾಂಗಣದಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ, ಅಪರಾಹ್ನ 3:15ಕ್ಕೆ ಮುಲ್ಕಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ, 3:30ಕ್ಕೆ ಮುಲ್ಕಿ ತಾಲೂಕು ಪ್ರಜಾಸೌಧ ಕಟ್ಟಡ ಕಾಮಗಾರಿ ವೀಕ್ಷಣೆ, ಸಂಜೆ 4:10ಕ್ಕೆ ಚೇಳಾರು ಕಂಡೇವು ಅರಸೇ ಉಳ್ಳಾಯೇ ನದಿತಟ ಕಲುಷಿತ ನೀರು ನಂದಿನಿ ನದಿ ಸೇರುವ ಸಮಸ್ಯೆಯ ಕುರಿತು ಸ್ಥಳ ಪರಿಶೀಲನೆ ಮಾಡುವರು.

ಸಂಜೆ 5:30ಕ್ಕೆ ದೇರಳಕಟ್ಟೆ ಯೆನೆಪೋಯ ವಿವಿಯಲ್ಲಿ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೆನೆಪೋಯ ಮತ್ತು ಕ್ರೀಡಾ ಇಲಾಖೆ ಹಾಗೂ ಯೆನೆಪೋಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆಯುವ ಅಂತರಾಷ್ಟ್ರೀಯ ಯುವಶೃಂಗಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News