ಸ್ಕೂಟರ್ ಕಳವು: ದೂರು ದಾಖಲು
Update: 2025-06-04 21:23 IST
ಮಂಗಳೂರು, ಜೂ.4: ನಗರದ ಕದ್ರಿ ಶಿವಭಾಗ್ 2ನೇ ಕ್ರಾಸ್‌ನ ಅಪಾರ್ಟ್‌ಮೆಂಟ್‌ವೊಂದರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿರುವ ಬಗ್ಗೆ ವಿದ್ಯಾರ್ಥಿಯೊಬ್ಬರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ನೇಹಿತ ಮುಹಮ್ಮದ್ ರಾಝಿ ಎಂಬವರಿಗೆ ಸೇರಿದ ಸ್ಕೂಟರ್‌ನ್ನು ಪಾರ್ಕಿಂಗ್ ಸ್ಥಳದಲ್ಲಿ ಎ.5ರಂದು ಸಂಜೆ ನಿಲ್ಲಿಸಿ ಸ್ವಂತ ಊರಾದ ಕೇರಳಕ್ಕೆ ತೆರಳಿ ಮೇ 31ರಂದು ವಾಪಸ್ ಬಂದಾಗ ಸ್ಕೂಟರ್ ಕಳವಾಗಿತ್ತು ಎಂದು ವಿದ್ಯಾರ್ಥಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.