×
Ad

ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನಾಪತ್ತೆ: ಪೊಲೀಸರಿಂದ ಹುಡುಕಾಟ

Update: 2025-06-05 18:52 IST

ಪಾಣೆಮಂಗಳೂರು: ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್‌, ಮೊಬೈಲ್, ಶರ್ಟ್ ಮತ್ತು ಚಪ್ಪಲಿ ಅನಾಥವಾಗಿ ಸಿಕ್ಕಿದ್ದು, ಪುತ್ತೂರು ಮೂಲದ ವ್ಯಕ್ತಿಯಾದಾಗಿದೆ ಎಂದು ಹೇಳಲಾಗಿದೆ.

ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು, ಇದನ್ನು ಅಲ್ಲಿಟ್ಟು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರಮೇಶ್ ರೈ ಅವರು ಇತ್ತೀಚಿಗೆ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಜೂ.5ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್‌ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ ನಂಬರ್ ಪಡೆದು ಪೋನ್ ಮಾಡಿದಾಗ ಇದು ಪುತ್ತೂರು ರಮೇಶ್ ರೈ ಅವರದ್ದು ಎಂದು ತಿಳಿದಿದ್ದು, ಮನೆಯವರಿಗೆ ತಿಳಿಸಲಾಗಿದೆ.

ಇದೀಗ ಸ್ಥಳದಲ್ಲಿ ರಮೇಶ್ ರೈ ಅವರ ಕುಟುಂಬದ ಸದಸ್ಯರು,ಪೊಲೀಸರು ಹಾಗೂ ಸ್ಥಳೀಯರು ಜಮಾಯಿಸಿದ್ದು, ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಾಟ ಪ್ರಾರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News