×
Ad

ಕಾಟಿಪಳ್ಳ: ಸಿವೈಸಿ ವತಿಯಿಂದ ಉಚಿತ ಪುಸ್ತಕ ವಿತರಣೆ

Update: 2025-06-05 20:05 IST

ಮಂಗಳೂರು: ಕೆನರಾ ಯೂತ್ ಕೌನ್ಸಿಲ್ ಕಾಟಿಪಳ್ಳ ಇದರ ವತಿಯಿಂದ ಕಾಟಿಪಳ್ಳ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ೩೯ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಮಾಜಿ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ, ಶಾಲೆಯ ಮುಖ್ಯಶಿಕ್ಷಕ ಅನಂತ್‌ರಾಮ್ ರಾವ್, ವಿಕಾಸ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮುಹಮ್ಮದ್ ಸಮೀರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಶರೀಫ್, ಮಾಜಿ ಅಧ್ಯಕ್ಷ ಶರೀಫ್ ಐಡಿಯಲ್, ಶಿಕ್ಷಕ ದಿನೇಶ್ ಶೇಟ್, ಶವಾಝ್ ರೂಪ್‌ಟೆಕ್, ಸಿ.ವೈ.ಸಿ. ಗ್ಲೋಬಲ್ ಸದಸ್ಯ ಜುನೈದ್ ಅತಿಥಿಗಳಾಗಿ ಭಾಗವಹಿಸಿದ್ದರು.

ಮಾಜಿ ಅಧ್ಯಕ್ಷ ಹಬೀಬ್ ಸ್ವಾಗತಿಸಿದರು. ಸಂಚಾಲಕ ಸಲೀಂ ರಝಾಕ್ ಶ್ಯಾಡೊ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸಮದ್ ಕಾಟಿಪಳ್ಳ ವಂದಿಸಿದರು. ಅಶ್ರಫ್ ತಾಜ್‌ಫಿಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News