×
Ad

ರೆಡ್‌ಕ್ರಾಸ್‌ನಿಂದ ನಾಗರಿಕ ಸುರಕ್ಷಾ ತರಬೇತಿಗೆ ಒತ್ತು: ನಿವೃತ್ತ ಎಡಿಜಿಪಿ ಭಾಸ್ಕರ ರಾವ್

Update: 2025-06-09 20:45 IST

ಮಂಗಳೂರು: ಸಮಾಜಮುಖಿ ಸೇವೆಗೆ ಇಡೀ ವಿಶ್ವದಲ್ಲೇ ರೆಡ್‌ಕ್ರಾಸ್ ಸಂಸ್ಥೆ ಅತ್ಯುತ್ತಮ ವೇದಿಕೆಯಾಗಿದೆ. ನಾಗರಿಕರ ಸುರಕ್ಷತೆಗೆ ರೆಡ್‌ಕ್ರಾಸ್ ವಿಶೇಷ ಅದ್ಯತೆ ನೀಡಿದ್ದು ಮುಂದಿನ ದಿನಗಳಲ್ಲಿ ರೆಡ್‌ಕ್ರಾಸ್ ಮೂಲಕ ನಾಗರಿಕ ಸುರಕ್ಷಾ ತರಬೇತಿ ನೀಡಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ , ನಿವೃತ್ತ ಎಡಿಜಿಪಿ ಭಾಸ್ಕರ ರಾವ್ ಹೇಳಿದ್ದಾರೆ.

ಸೋಮವಾರ ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಕಚೇರಿಗೆ ಭೇಟಿ ನೀಡಿದ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕ ರಾಜ್ಯದ ಅತ್ಯುತ್ತಮ ಘಟಕಗಳಲ್ಲಿ ಒಂದಾಗಿದ್ದು, ಭವ್ಯ ಕಟ್ಟಡ ಸಹಿತ ಉತ್ತಮ ಮೂಲಭೂತ ಸೌಲಭ್ಯ ಹೊಂದಿದೆ ಎಂದರು.

ಉದ್ಘಾಟನೆಗೆ ಸಿದ್ದವಾಗಿರುವ ದ.ಕ.ಜಿಲ್ಲಾ ಘಟಕದ ಶತಮಾನೋತ್ಸವ ಕಟ್ಟಡವನ್ನು ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ಸಂಸ್ಥೆಯ ಕಾರ್ಯಚಟವಟಿಕೆಗಳ ವಿವರ ನೀಡಿದರು. ಭಾಸ್ಕರ ರಾವ್ ಅವರನ್ನು ಇದೇ ಸಂದರ್ಭದಲ್ಲಿ ದ.ಕ. ರೆಡ್‌ಕ್ರಾಸ್ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ , ರೆಡ್‌ಕ್ರಾಸ್ ಜಿಲ್ಲಾ ಘಟಕದ ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಪುಷ್ಪರಾಜ್ ಜೈನ್, ಗುರುದತ್ ಕಾಮತ್, ಪಿ.ಬಿ.ಹರೀಶ್ ರೈ, ಸಿಬ್ಬಂದಿ ಮಲ್ಲಿಕಾ, ಅನಿತಾ, ಗಿರೀಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News