×
Ad

ಕನ್ನಡನಾಡು ನುಡಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಕಯ್ಯಾರರು: ಭುವನ ಪ್ರಸಾದ್ ಹೆಗ್ಗಡೆ

Update: 2025-06-10 19:43 IST

ಮಂಗಳೂರು,ಜೂ.10;ಕನ್ನಡ ನಾಡು ನುಡಿ ಸಂಸ್ಕೃತಿ ಗಳ ಕುರಿತು ಬದ್ಧತೆ, ತತ್ತ್ವ, ಆದರ್ಶ ಗಳೊಂದಿಗೆ ಕವಿಯಾಗಿ ಹೋರಾಟಗಾರರಾಗಿ ಕಯ್ಯಾರ ಕಿಞ್ಞಣ್ಣ ರೈ ಗಳು ತಮ್ಮನ್ನು ಅರ್ಪಿಸಿ ಕೊಂಡ ಶ್ರೇಷ್ಠರು ಎಂದು ಹಿರಿಯ ಸಾಹಿತ್ಯ ಸಂಘಟಕ ಭುವನಪ್ರಸಾದ್ ಹೆಗ್ಗಡೆ ನುಡಿದರು.

ಅವರು ಸುರತ್ಕಲ್ ಎಸ್.ಆರ್.ಹೆಗ್ಡೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಯ್ಯಾರ ನೆನಪು..110 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕಾಸರಗೋಡು ಕರ್ನಾಟಕ ಕೆ ಸೇರಬೇಕೆ ನ್ನುವ ಬಯಕೆಯಿಂದ ವ್ರತದಂತೆ ಹೋರಾಡಿ ದರು ಎಂದರು.

ಕಯ್ಯಾರ ಕಿಞ್ಞಣ್ಣ ರೈಗಳ ಪುತ್ರಿ ದೇವಕೀದೇವಿ ಮಾತಾ ನಾಡಿ ಕಯ್ಯಾರ ರ ಮನ ಸದಾ ನಾಡು ನುಡಿ ಮತ್ತು ತಮ್ಮ ವಿದ್ಯಾರ್ಥಿಗಳ ಅಭಿವೃದ್ದಿಗಾಗಿ ಮಿಡಿಯುತ್ತಿತ್ತು ಎಂದರು.

ಹಿರಿಯ ಸಾಹಿತಿ ಹಾಗು ಸಂಶೋಧಕಿ ಇಂದಿರಾ ಹೆಗ್ಗಡೆ ಅವರು ಮಾತನಾಡಿ ಶಿಕ್ಷಣ, ಸಾಹಿತ್ಯ ಮತ್ತು ಸಮಾಜಸೇವೆ ಕ್ಷೇತ್ರ ಗಳಲ್ಲಿ ಸಮಾನ ಆಸ ಕ್ತರಾಗಿದ್ದ ಕಯ್ಯಾರ ರ ಕೊಡುಗೆ ಅಪಾರ ವಾದುದು ಎಂದರು. ಹಿರಿಯ ಕಲಾವಿದೆ ಗೀತಾ ಸುರತ್ಕಲ್ ಕಯ್ಯಾರ ನೆನಪು ಗಳನ್ನು ಹಂಚಿ ಕೊಂಡರು.

ಸಾಹಿತಿ ದೇವಿಕಾ ನಾಗೇಶ್,ಸುಜಾತಾ, ಪೌರ್ಣಿ ಮ ಪ್ರೇಮ್, ಪ್ರೇಮ್ ಪ್ರಸಾದ್ ಬೆಂಗಳೂರು,ಬೆನೆಟ್ ಅಮ್ಮನ್ನ, ಉದಯ,ಸಚಿತ, ಸತೀಶ್ ಕಯ್ಯಾರ ರ ಕವನಗಳನ್ನು ವಾಚಿಸಿದರು.

ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಚಿತ್ರಾಪುರ ಸ್ವಾಗತಿಸಿದರು. ಕೋಶಾಧಿಕಾರಿ ಜ್ಯೋತಿ ಚೇಲೈರು ಕಯ್ಯಾರರ ಕುರಿತು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುರತ್ಕಲ್ ಹೋಬಳಿ ಘಟಕ ದ ಅಧ್ಯಕ್ಷೆ ಗುಣವತಿ ರಮೇಶ್ ವಂದಿಸಿದರು.

ಕನ್ನಡ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಕೊಡ ಮಾಡುವ ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ಪುರಸ್ಕೃತೆ ಇಂದಿರಾ ಹೆಗ್ಗಡೆ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಪ್ರಶಸ್ತಿ ಮೊತ್ತ ರೂ.125000 ವನ್ನು ಇಂದಿರಾ ಹೆಗ್ಗಡೆ ಅವರು ಟ್ರಸ್ಟ್ ನ ಚಟುವಟಿಕೆ ಗಳಿಗಾಗಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News