ಕೈ ಬಟ್ಟಲ್ ಬಳಿ ತಡೆಗೋಡೆ ಕುಸಿತ; ಮನೆಗೆ ಹಾನಿ
Update: 2025-06-15 21:18 IST
ಮಂಗಳೂರು, ಜೂ.15: ಭಾರೀ ಮಳೆಗೆ ಕದ್ರಿ ಕೈ ಬಟ್ಟಲ್ ಬಳಿ ತಡೆಗೋಡೆ ಕುಸಿದು ಅಶೋಕ್ ಎಂಬವರ ಮನೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ.
ಅಡುಗೆ ಕೋಣೆಯು ಸಂಪೂರ್ಣ ಹಾನಿಗೊಂಡಿದ್ದು, ಮನೆಯು ಕುಸಿಯುವ ಭೀತಿಯಲ್ಲಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೊಂದರೆಗೊಳಗಾದ ಮನೆಯ ಮಂದಿ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.