ನೆಲ್ಯಾಡಿ| ರಸ್ತೆ ಅಪಘಾತ; ಗಾಯಾಳು ಯುವಕ ಮೃತ್ಯು
ಮಹೇಶ್
ಉಪ್ಪಿನಂಗಡಿ: ಮೂರು ದಿನದ ಹಿಂದೆ ನೆಲ್ಯಾಡಿ ಸಮೀಪದ ರೆಖ್ಯ ಗ್ರಾಮದ ಪರ್ಕಳ ಸೇತುವೆ ಬಳಿ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಜೂ.20ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರು ಬೊಮ್ಮನಹಳ್ಳಿ ಬಿಲೇಕಹಳ್ಳಿ ನಿವಾಸಿ ಮಹೇಶ್(30 )ಮೃತಪಟ್ಟವರು. ಮಹೇಶ್ ಹಾಗೂ ಇತರ ನಾಲ್ವರು ಕಾರಿನಲ್ಲಿ ಧರ್ಮಸ್ಥಳಕ್ಕೆ ಬರುತ್ತಿದ್ದ ವೇಳೆ ನೆಲ್ಯಾಡಿ ಸಮೀಪ ರೆಖ್ಯ ಗ್ರಾಮದ ಪರಕ್ಕಳ ಸೇತುವೆ ಬಳಿ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್‍ಗೆ ಕಾರು ಡಿಕ್ಕಿಯಾಗಿ ಬಳಿಕ ಪಕ್ಕದ ತಡೆಗೋಡೆಗೆ ಡಿಕ್ಕಿಯಾಗಿ ನಿಂತಿತ್ತು. ಘಟನೆಯಲ್ಲಿ ಮಹೇಶ್ ಅವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಜೂ.20ರಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆ ಕುರಿತಂತೆ ಟ್ರ್ಯಾಕ್ಟರ್ ಚಾಲಕ ಚಿದಾನಂದ ರೇವಪ್ಪ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.