ಕೂಳೂರು ಚರ್ಚ್: ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ
ಮಂಗಳೂರು: ಕೂಳೂರು ಸಂತ ಅಂತೋನಿ ಚರ್ಚಿನ ಕ್ಯಾಥೋಲಿಕ್ ಸಭಾ ಮತ್ತು ಐ.ಸಿ.ವೈ.ಎಂ. ಘಟಕದ ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ರವಿವಾರ ಕೂಳೂರು ಮೇಲ್ ಕೊಪ್ಪಲ ಮೇಝಿ ಟೀಚರ್ ಅವರ ಗದ್ದೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ವಂ.ವಿಕ್ಟರ್ ವಿಜಯ್ ಲೋಬೊ, ಮುಖ್ಯ ಅತಿಥಿಗಳಾಗಿದ್ದ ಎಪಿಸ್ಕೋಪಲ್ ಸಿಟಿ ವಲಯದ ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಐಡಾ ಪುರ್ಟಾಡೊ, ಐ.ಸಿ.ವೈ.ಎಂ. ಕೇಂದ್ರೀಯ ಸಮಿತಿ ಅಧ್ಯಕ್ಷ ವಿನ್ ಸ್ಟನ್ ಜೋಯಲ್ ಸಿಕ್ವೇರಾ ಮತ್ತು ತೀರ್ಪುಗಾರ ಪ್ರವೀಣ್ ಲೋಬೊ ಬಿಜೈ ಅವರು ಸಂಯುಕ್ತವಾಗಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗದ್ದೆಯಲ್ಲಿ ನಡೆದ ಸ್ಪರ್ಧಾ ಕೂಟದಲ್ಲಿ ಮೊದಲ ಬಹುಮಾನವನ್ನು ಸೈಂಟ್ ಅನ್ನಾ ವಾರ್ಡ್, ದ್ವಿತೀಯ ಬಹುಮವನ್ನು ಸಂತ ಅಂತೋನಿ 3 ನೇ ವಾರ್ಡ್ ಹಾಗೂ ತೃತೀಯ ಬಹುಮಾನವನ್ನು ಸಂತ ಜೋಸೆಫ್ ವಾರ್ಡ್ ಪಡೆದು ಕೊಂಡಿತು. ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.
ಕ್ಯಾಥೊಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ ಸ್ವಾಗತಿಸಿ ಐ.ಸಿ.ವೈ. ಎಂ. ಅಧ್ಯಕ್ಷ ಆರ್ವಿನ್ ಮೊಂತೆರೊ ವಂದಿಸಿದರು. ರೀಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.