ಮಂಜನಾಡಿ ಅಲ್ ಮದೀನದಲ್ಲಿ ಸಮಸ್ತ ಸ್ಥಾಪಕ ದಿನಾಚರಣೆ
Update: 2025-06-26 20:53 IST
ಮಂಜನಾಡಿ: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ 100ನೇ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಮಂಜನಾಡಿ ಅಲ್ ಮದೀನದಲ್ಲಿ ಗುರುವಾರ ಅಲ್ ಮದೀನಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಧ್ವಜಾರೋಹಣ ನಡೆಸಿದರು.
ದ’ಅವಾ ಕಾಲೇಜಿನ ಪ್ರಾಂಶುಪಾಲ ಅಸ್ಸಯ್ಯಿದ್ ಉವೈಸ್ ಅಸ್ಸಖಾಫ್ ಅಲ್‌ವಾರಿಸ್ ದುಆಗೈದರು. ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಬ್ದುರ‌್ರಹ್ಮಾನ್ ಅಹ್ಸನಿ ಮತ್ತು ಅಲ್ ಮದೀನ ವುಮೆನ್ಸ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಮುನೀರ್ ಅಹ್ಮದ್ ಸಖಾಫಿ ಅಲ್ ಕಾಮಿಲ್ ಭಾಷಣಗೈದರು.
ಸಂಸ್ಥೆಯ ಎಲ್ಲಾ ವಿಭಾಗದ ಉಸ್ತಾದರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಸಂಘಟನೆ ಬಿಷಾರತುಲ್ ಮದೀನಾದ ಅಧ್ಯಕ್ಷ ಲುಕ್ಮಾನ್ ಮದನಿನಗರ ವಂದಿಸಿದರು.