ತುಂಬೆ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ, ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
ಬಂಟ್ವಾಳ : ಡಾ.ಬಿ.ಅಹಮದ್ ಹಾಜಿ ಅವರ ಸಾಧನಾ ಗಾಥೆಯನ್ನು ಹಾಗೂ ಅವರ ಜೀವನದ ಬಗ್ಗೆ ಕೇಳಿದಾಗ ಅವರು ಎಷ್ಟೊಂದು ಉದಾತ್ತ ವ್ಯಕ್ತಿತ್ವದವರು ಮತ್ತು ಶಿಸ್ತು ಮತ್ತು ಬದ್ಧತೆಯಲ್ಲಿ ಬಾಳಿದವರು ಎನ್ನುವುದು ಅರ್ಥವಾಗುತ್ತದೆ ಎಂದು ಬರ್ನಿಂಗ್ ಹ್ಯಾಮ್ ಹೀರ್ಸಿಂಕ್ ಸ್ಕೂಲ್ ಆಫ್ ಮೆಡಿಸಿನ್ ನ ಅಲಬಾಮಾ ಯುನಿವರ್ಸಿಟಿಯ ಸೀನಿಯರ್ ವೈಸ್ ಪ್ರೆಸಿಡೆಂಟ್, ಫಾರ್ ಮೆಡಿಸಿನ್ ಡೀನ್ ಡಾ.ಅಗರ್ ವಾಲ್ ಹೇಳಿದರು.
ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ತುಂಬೆ ಇದರ ವತಿಯಿಂದ ಏರ್ಪಡಿಸಿದ್ದ ಫೌಂಡರ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಥವರನ್ನು ರೋಲ್ ಮಾಡೆಲ್ ಆಗಿಟ್ಟುಕೊಂಡು ಅವರ ಮಕ್ಕಳಾದ ಬಿ.ಎಂ.ಅಶ್ರಫ್, ಅಬ್ದುಲ್ ಸಲಾಂ, ತುಂಬೆ ಮೊಯ್ದೀನ್ ಹಾಗೂ ಅವರ ಮಗಳು ಶಬನಾ ಫೈಝಲ್ ತುಂಬೆಯಲ್ಲಿ ಮತ್ತು ವಿದೇಶದಲ್ಲಿ ನಡೆಸುತ್ತಿರುವ ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ನಿಜಕ್ಕೂ ಉತ್ತಮ ಕೊಡುಗೆಗಳಾಗಿವೆ. ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಾಧಿಪತಿಗಳು ತುಂಬೆಯ ವಿದ್ಯಾ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ ಅರ್ಹ ಮಕ್ಕಳಿಗೆ ಒಂದು ಎಂ.ಬಿ.ಬಿ.ಎಸ್ ಮತ್ತು ಐದು ಪ್ಯಾರಾ ಮೆಡಿಕಲ್ ಸೀಟುಗಳನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ತುಂಬೆ ಮೊಯ್ದಿನ್ ಅವರು ಕೊಡಮಾಡಿರುವ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ನ್ನು ಬರ್ನಿಂಗ್ ಹ್ಯಾಮ್ ನ ಅಲಬಾಮಾ ಯುನಿವರ್ಸಿಟಿಯ ಗ್ರಾಜುವೇಟ್ ಸ್ಕೂಲ್ ನ ರಿಸರ್ಚ್ ಎಂಡ್ ಟ್ರೈನಿಂಗ್ ಸೆಂಟರ್ ನ ಎಸೋಸಿಯೇಟ್ ಡೀನ್ ಡಾ.ಲಿಸಾ ಎಂ ಕರ್ಟಿಸ್ ಉದ್ಘಾಟಿಸಿ, ಶುಭ ಹಾರೈಸಿದರು.
ಎಂ.ಇ.ಟಿ ಟ್ರಸ್ಟಿ ಮೊಹಮ್ಮದ್ ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ಹಾಗೂ ಚಿತ್ರ ಕಲಾ ಅಧ್ಯಾಪಕ ಪದ್ಮನಾಭ ಡಾ.ಅಹಮದ್ ಹಾಜಿ ಅವರ ಕುರಿತಾದ ಸಂಸ್ಮರಣಾ ನುಡಿಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಮಾತನಾಡಿ ಅಹಮದ್ ಹಾಜಿಯವರ ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಸಿವಿಲ್ ಕೆಲಸದ ಸೂಪರ್ವಿಶನ್ ಕಾರ್ಯದಲ್ಲಿ ಸಹಕರಿಸಿದ ಬಿ.ಎ.ಗ್ರೂಪ್ ನ ಸಿರಾಜ್ ಮತ್ತು ಸುಧೀರ್ ಇವರನ್ನು ಗೌರವಿಸಲಾಯಿತು.
ಕಂಪ್ಯೂಟರ್ ಲ್ಯಾಬ್ ನಿರ್ವಾಹಕ ಗೋಪಾಲ್, ಪಿಟಿಎ ಅಧ್ಯಕ್ಷ ನಿಸಾರ್ ಅಹಮದ್, ಕಾರ್ಯಕಾರಿ ಸಮಿತಿಯ ಪ್ರಮುಖರಾದ ಮ್ಯಾಕ್ಸಿಂ ಕುವೆಲ್ಹೋ, ಬಶೀರ್ ತಂಡೇಲ್, ಶಾಫಿ ಅಮ್ಮೆಮ್ಮಾರ್, ತುಂಬೆ ಹೈಸ್ಕೂಲ್ ನ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಕೆ, ನಿವೃತ್ತ ಕನ್ನಡ ಶಿಕ್ಷಕ ರಾಜ ಶೆಟ್ಟಿ, ಎಂ.ಇ.ಟಿ ಮ್ಯಾನೇಜರ್ ಅಬ್ದುಲ್ ಕಬೀರ್, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ತುಂಬೆ ಪ.ಪೂ.ಕಾಲೇಜು ಪ್ರಾಂಶುಪಾಲ ವಿ.ಎಸ್. ಭಟ್ ಸ್ವಾಗತಿಸಿ, ತಂಬೆ ಕನ್ನಡ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕೆ ವಂದಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ ನಾಯಕ್ ಕಾರ್ಯಕ್ರಮ ನಿರೂಪಿಸಿದರು.