ಮಂಗಳೂರು: ಹಸಿ ಮೀನು ವ್ಯಾಪಾರಿ ಅಬ್ದುಲ್ ಕರೀಂ ನಿಧನ
Update: 2025-07-06 19:05 IST
ಮಂಗಳೂರು, ಜು. 6: ಇಲ್ಲಿನ ಹಳೆಬಂದರ್ ನಲ್ಲಿ ಇತ್ತೀಚಿನವರೆಗೂ ಹಸಿಮೀನು ವ್ಯಾಪಾರ ಮಾಡುತ್ತಿದ್ದ, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಮೀನು ಮಾರಾಟಗಾರರ ಸಹಕಾರಿ ಸಂಘ (ರಿ) ಮತ್ತು ಸೀಫುಡ್ ಬಯರ್ಸ್ ಎಸೋಸಿಯೇಶನ್ (ರಿ) ಮಾಜಿ ಕಾರ್ಯದರ್ಶಿ ಅಬ್ದುಲ್ ಕರೀಂ (73) ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ರವಿವಾರ ನಸುಕಿನ ವೇಳೆ ಮೃತರಾದರು.
ಹಲವು ವರ್ಷಗಳಿಂದ ಹಳೆಬಂದರಿನಲ್ಲಿ ವಾಸವಾಗಿದ್ದ ಅವರು ಕಳೆದ ಮೂರು ವರ್ಷಗಳಿಂದ ಜೆಪ್ಪುವಿನ ತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ಅವರ ಮೃತದೇಹದ ಅಂತ್ಯ ಸಂಸ್ಕಾರ ಬೋಳಾರ ಜುಮ್ಮಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.
ಮೃತರು ಪತ್ನಿ, ಮೂವರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.