ಶಿಸ್ತುಬದ್ಧ, ಸಾಂಪ್ರಾದಾಯಿಕ ರೀತಿಯಲ್ಲಿ ಜನಾಕರ್ಷಣೆಯ ದಸರಾ ಉತ್ಸವ: ಡಾ. ಜಿ. ಶಂಕರ್
ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷ 4ನೇ ಬಾರಿಗೆ ಉಡುಪಿ ಉಚ್ಚಿಲ ದಸರಾ-2025 ಉತ್ಸವವು ಕ್ಷೇತ್ರದ ಸದ್ಭಕ್ತರ ಹಾಗೂ ದಾನಿಗಳ ಸಹಕಾರ- ಸಹಯೋಗದಿಂದ ಶಿಸ್ತು ಬದ್ಧ ಹಾಗೂ ಸಾಂಪ್ರಾದಾಯಿಕವಾಗಿ ಜನಾಕರ್ಷಣೆಯ ದಸರಾ ಉತ್ಸವವಾಗಿ ಆಯೋಜನೆ ಮಾಡಲು ಸಂಕಲ್ಪ ಮಾಡಲಾಗಿದ್ದು, ಎಲ್ಲರೂ ಸಹಕರಿಸುವಂತೆ ದಕ ಮೊಗವೀರ ಮಹಾಜನ ಸಂಘದ ಸಲಹೆಗಾರ ರಾದ ನಾಡೋಜ ಡಾ. ಜಿ. ಶಂಕರ್ ರವರು ಮನವಿ ಮಾಡಿಕೊಂಡರು.
ಪ್ರತೀದಿನ ಚಂಡಿಕಾಯಾಗ, ಕಲ್ಲೋಕ್ತ ಪೂಜೆ, ಸಾಮೂಹಿಕ ಕುಂಕುಮಾರ್ಚನೆ, ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಭಿನ್ನ ರೀತಿಯ ವಸ್ತು ಪ್ರದರ್ಶನದೊಂದಿಗೆ ವೈಭವೋಪೇತ ವಿಸರ್ಜನಾ ಮೆರವಣಿಗೆ ಆಚರಿಸಲು ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ದ.ಕ. ಮೊಗವೀರ ಮಹಾಜನ ಸಂಘ (ರಿ.) ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ ಶಾಸಕ ಯಶಪಾಲ್ ಎ ಸುವರ್ಣ, ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನೆ ಬೆಂಗ್ರೆ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ್ ಸುವರ್ಣ, ಕುಂದಾಪುರ ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಪ್ರಮುಖರಾದ ಅನಿಲ್ ಕುಮಾರ್ ಬೊಕ್ಕಪಟ್ಟ, ರತ್ನಾಕರ್ ಸಾಲ್ಯಾನ್, ಸುಜಿತ್ ಸಾಲ್ಯಾನ್, ಆರ್.ಕೋಟ್ಯಾನ್ , ಶ್ರೀಪತಿ ಭಟ್ ಉಚ್ಚಿಲ ಮನೋಜ್ ಕಾಂಚನ್ಷ್, ಉಷಾರಾಣಿ ಬೋಳೂರು, ಸುಗುಣ ಎಸ್. ಕರ್ಕೇರ ಹಾಗೂ ಆಡಳಿತ ಸಮಿತಿಯ ಸದಸ್ಯರು, ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಸದಸ್ಯರು,ಮಹಿಳಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್ ಮಲ್ಪೆ ವಂದಿಸಿದರು.