ಅಕ್ರಮ ದನ ಸಾಗಾಟ ಪ್ರಕರಣ: ಮೂವರ ಬಂಧನ
Update: 2025-07-07 22:19 IST
ಉಪ್ಪಿನಂಗಡಿ: ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ವರದಿಯಾಗಿದೆ.
ಅಬೂಬಕ್ಕರ್ ಅಲಿಯಾಸ್ ಶಮೀರ್, ಇಮ್ರಾನ್ ಮತ್ತು ಅಕ್ರಮ್ ಬಂಧಿತ ಆರೋಪಿಗಳು. ಈ ಮೂವರು ಪಿಕಪ್ ವಾಹನದಲ್ಲಿ ದನವನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕೃತ್ಯವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಹಾಗೂ 22,000 ರೂ. ಮೌಲ್ಯದ ದನ ಮತ್ತು ಪಿಕಪ್ ವಾಹನವನ್ನು ಉಪ್ಪಿನಂಗಡಿ ಠಾಣೆಯ ತನಿಖಾ ವಿಭಾಗದ ಎಸೈ ಗುರುನಾಥ ಬಿ ಹಾದಿಮನಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.