×
Ad

ಗಾಂಜಾ ಸೇವನೆ ಆರೋಪ: ನಾಲ್ಕು ಮಂದಿ ಸೆರೆ

Update: 2025-07-07 22:34 IST

ಮಂಗಳೂರು, ಜು.7: ಸಾರ್ವಜನಿಕರ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ, ಬರ್ಕೆ ಠಾಣೆಯ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಪಾಂಡೇಶ್ವರ ಓಲ್ಡ್ ಕೆಂಟ್ ರಸ್ತೆಯ ಬಳಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಕೇರಳದ ತಿರುವನಂತಪುರ ಮೂಲದ ಅದ್ವೈತ್ (20) ಮತ್ತು ಗೂಡ್‌ಶೆಡ್ ಬಳಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತದ್ದ ಕೇರಳದ ಇಡುಕ್ಕಿ ಜಿಲ್ಲೆಯ ಅಖಿಲ್ ಜೋಶಿ (20) ಎಂಬವರನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಸುಲ್ತಾನ್ ಬತ್ತೇರಿ ಪರಪ್ಪು ಬಳಿ ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ತೊಕ್ಕೊಟ್ಟು ಸಮೀಪದ ಕಲ್ಲಾಪು ನಿವಾಸಿ ಅಮೀರ್ (32) ಮತ್ತು ಕುದ್ರೋಳಿ ನಿವಾಸಿ ಪ್ರಶಾಂತ್ ಕುಮಾರ್ (36) ಎಂಬಿಬ್ಬರನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ನಾಲ್ಕು ಮಂದಿಯೂ ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News