ವಿಟ್ಲ: ಬಾರ್, ರೆಸ್ಟೋರೆಂಟ್‍ಗೆ ಮುಖ್ಯಾಧಿಕಾರಿಗಳ ತಂಡದಿಂದ ದಾಳಿ
ವಿಟ್ಲ: ವಿಟ್ಲದ ಬೊಬ್ಬೆಕೇರಿಯ ವಸತಿಗೃಹ ಸಹಿತ ಇರುವ ಬಾರ್ ಮತ್ತು ರೆಸ್ಟೋರೆಂಟ್‍ನ್ನು ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ನೇತೃತ್ವದಲ್ಲಿ ಆರೋಗ್ಯ ವಿಭಾಗದ ಸಿಬ್ಬಂದಿ ತಪಾಸಣೆ ನಡೆಸಿದರು.
ಇಲ್ಲಿ ಸ್ವಚ್ಚತೆ ಕಾಪಾಡದೇ ಇರುವುದು ಕಂಡುಬಂದ ಮೇರೆಗೆ ರೆಸ್ಟೋರೆಂಟ್ ನ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಾಧಿಕಾರಿ ಸ್ವಚ್ಚತೆ ಕಾಪಾಡದೇ ಇದ್ದರೆ ದಂಡ ವಿಧಿಸಿ ಉದ್ದಿಮೆ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೂಡಲೇ ಅಲ್ಲಿಯ ಸಿಬ್ಬಂದಿ ಸ್ವಚ್ಚತೆಗೆ ಕ್ರಮವಹಿಸಿ ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮವಹಿಸಲಾಗು ವುದು ಎಂದು ರೆಸ್ಟೋರೆಂಟ್ ನ ವ್ಯವಸ್ಥಾಪಕರು ತಿಳಿಸಿದರು. ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡಣೆ ಮಾಡಿ ತ್ಯಾಜ್ಯ ಸಂಗ್ರಾಹಕರಿಗೆ ನೀಡಲು ಸೂಚಿಸಲಾಯಿತು. ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಲಾಯಿತು.
ಉದ್ದಿಮೆಯ ಸ್ವತ್ತಿನ ಇ ಖಾತಾ ಮಾಡುವಂತೆ ತಿಳುವಳಿಕೆ ನೀಡಲಾಯಿತು. ನಂತರ ಚಂದಳಿಕೆಯ ಗೇರು ಬೀಜ ಕಾರ್ಖಾನೆ ಪರಿಶೀಲಿಸಯಿತು. ತಂಡದಲ್ಲಿ ಮುಖ್ಯಾಧಿಕಾರಿ ಕರುಣಾಕರ ವಿ, ಲ್ಯಾನ್ಸಿ ಬ್ರಿಯಾನ್ ಹಾಗೂ ಆರೋಗ್ಯ ವಿಭಾಗದ ಸಿಬ್ಬಂದಿ ಇದ್ದರು.