ಮಂಗಳೂರು: ʼಟ್ಯಾಲೆಂಟ್ʼ ವತಿಯಿಂದ ಮೊಬೈಲ್ ತರಬೇತಿಗೆ ಅರ್ಜಿ ಆಹ್ವಾನ
Update: 2025-07-16 18:43 IST
ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಇದರ ವತಿಯಿಂದ 52ನೇ ಬ್ಯಾಚಿನ ಮೊಬೈಲ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮೊಬೈಲ್ ಸಾಫ್ಟ್‌ವೇರ್ ಮತ್ತು ಹಾರ್ಡ್‍ವೇರ್ ಬಗ್ಗೆ ಉತ್ತಮ ತರಬೇತಿಯನ್ನು ನುರಿತ ಶಿಕ್ಷಕರಿಂದ ನೀಡಲಾಗುತ್ತಿದ್ದು, ಈಗಾಗಲೇ ಇಲ್ಲಿ ಕಲಿತ ಯುವಕರು ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 19. ನಿರುದ್ಯೋಗಿ ಯುವಕರಿಗೆ ಮತ್ತು ಮದ್ರಸ ಅದ್ಯಾಪಕರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಇದರ ಪ್ರಯೋಜನ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವಿಶ್ವಾಸ್ ಕ್ರೌನ್, ಕೊಚಿನ್ ಬೇಕರಿ ಹತ್ತಿರ, ಕಂಕನಾಡಿ ಮಂಗಳೂರು-2 ದೂರವಾಣಿ-0824-4267883, 9972283365, 9844573983 ನ್ನು ಸಂಪರ್ಕಿಸುವಂತೆ ಸಂಸ್ಥೆಯ ಸದಸ್ಯ ಅಬ್ದುಲ್ ಮಜೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.