×
Ad

ಪಠ್ಯದ ಜೊತೆಗೆ ಸೌಹಾರ್ದತೆಯ ಮೌಲ್ಯವನ್ನು ಬಿತ್ತೋಣ : ಡಾ. ಉದಯ ಕುಮಾರ್

Update: 2025-07-16 20:14 IST

ಮಂಗಳೂರು: ಶಾಲಾ ಕಾಲೇಜು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯ ಮೂಲಕ ಸೌಹಾರ್ದ ಬದುಕಿನ ಮೌಲ್ಯವನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ವಿ.ವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಇರ್ವತ್ತೂರು ಹೇಳಿದರು.

ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಮೂಲಕ ಆಯೋಜಿಸಿದ ರಂಗಚಲನ ತಂಡ ಅಭಿನಯಿಸಿದ ತುಳುನಾಡ ಸೌಹಾರ್ದ ಪರಂಪರೆಯನ್ನು ಬಿಂಬಿಸುವ ಱಜಾಗ್‌ರ್ತೆ ಕಿರು ತುಳು ನಾಟಕದ ನಾಲ್ಕನೇ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಊರಿನಲ್ಲಿ ಸಾಮಾಜಿಕ ಸೌಹಾರ್ದ ಇಲ್ಲದಿದ್ದಾಗ, ಅಲ್ಲಿ ನೆಮ್ಮದಿ ಜೀವನ ಇರುವುದಿಲ್ಲ, ನೆಮ್ಮದಿಯ ಬದುಕನ್ನು ರೂಪಿಸಬೇಕಾದರೆ ನಾವೆಲ್ಲರೂ ಒಗ್ಗಟ್ಟಿನ ಜೀವನವನ್ನು ನಡೆಸಬೇಕು ಎಂದು ಡಾ.ಉದಯ್ ಕುಮಾರ್ ಇರ್ವತ್ತೂರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ ವಿದ್ಯಾರ್ಥಿಗಳಿಗಾಗಿಯೇ ನಾಟಕ ನಿರ್ಮಿಸಲಾಗಿದೆ. ಈಗಾಗಲೇ ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ನಾಟಕವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಕ್ರಿಷ್ಟೋಪರ್ ಉಪಸ್ಥಿತರಿ ದ್ದರು. ಕಾರ್ಯಕ್ರಮದ ಬಳಿಕ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನ ಮತ್ತು ರಂಗ ಚಲನ ಕಲಾವಿದರು ಅಭಿನಯಿಸಿದ ಱಜಾಗ್‌ರ್ತೆ ತುಳು ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News