×
Ad

ವಿಶ್ವ ಕೊಂಕಣಿ ಕೇಂದ್ರ: ಆತ್ಮ ರಕ್ಷಣೆಯ ತರಬೇತಿ, ಪ್ರಾತ್ಯಕ್ಷಿಕೆ ಕಾರ್ಯಾಗಾರ

Update: 2025-08-03 18:17 IST

ಮಂಗಳೂರು: ಕುಡಾಳ್ ದೇಶ್ಕರ್ ಸಮುದಾಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶ್ವ ಕೊಂಕಣಿ ಕೇಂದ್ರ ನಡೆಯುತ್ತಿರುವ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘‘ಪರಿಣತಿ’’ -2025’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಮೂರನೇ ದಿನ ಶನಿವಾರ ಸ್ವರಕ್ಷಣಾ ಸಂಸ್ಥೆಯ ವತಿಯಿಂದ (ಸೆಲ್ಫ್ ಡಿಫೆನ್ಸ್) ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ತಿಕ್ ಎಸ್ ಕಟೀಲ್ ಹಾಗೂ ಅವರ ತಾಯಿ ಶೋಭಲತಾ ಜೊತೆಗೂಡಿ ತಮ್ಮ ಆತ್ಮ ರಕ್ಷಣೆಯನ್ನು ಹೇಗೆ ಮಾಡಬೇಕು ಎಂದು ಪ್ರಾತ್ಯಕ್ಷಿಕೆಯೊಂದಿಗೆ ಮನವರಿಕೆ ಮಾಡಿಕೊಟ್ಟರು.

ಬೆಳಗ್ಗೆ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಯಾರೊಲ್ ಪಾಯಸ್ ಅವರು ಇಂಟರ್ ವ್ಯೆ ವೃತ್ತಿಪರ ಸಂಭಾಷಣೆಯನ್ನು ತಿಳಿಸಿ ಕೊಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ, ಇವರು ಬ್ಲ್ಯಾಕ್ ಬೆಲ್ಟ್ ಕಾರ್ತಿಕ್ ಕಟೀಲ್ ಹಾಗೂ ಅವರ ತಾಯಿ ಶೋಭಲತಾ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ. ರಮೇಶ ನಾಯಕ್ ಮೈರಾ, ಕಾರ್ಯದರ್ಶಿ ಡಾ.ಕಸ್ತೂರಿ ಮೋಹನ ಪೈ, ಸುಚಿತ್ರಾ ರಮೇಶ್ ನಾಯಕ್, ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ ಪೈ ಉಪಸ್ಥಿತರಿದ್ದರು.

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ, ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ನಿಕಟಪೂರ್ವ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಸುಜಾತಾ ರಮೇಶ್ ಸಾಮಂತ್, ಮೋಹನ್ ನಾಯಕ್ ಒಡ್ಡೂರು, ಗೋಪಾಲ್ ಸಾಮಂತ್ ಮೈರಾ, ರಂಜಿತಾ ಜಯರಾಂ, ಲಕ್ಷ್ಮೀ ಕಿಣಿ, ಮುಂತಾದವರು ಉಪಸ್ಥಿತರಿದ್ದರು.

ಶಿಬಿರಾರ್ಥಿ ಅಶ್ವಿನಿ ವಂದಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News