×
Ad

ಅಲ್ಪಸಂಖ್ಯಾತರ ಸೇವಾ ಸಂಸ್ಥೆಗಳಿಗೆ ಅನುದಾನ: ಅರ್ಜಿ ಆಹ್ವಾನ

Update: 2025-08-04 20:51 IST

ಮಂಗಳೂರು,ಆ.4:ವೃದ್ಧಾಶ್ರಮ/ಅನಾಥಾಶ್ರಮ ಮತ್ತು ಎಚ್‌ಐವಿ/ಏಡ್ಸ್ ನಿರ್ಗತಿಕರ ಕೇಂದ್ರ ಮತ್ತು ಖಾಸಗಿ ಹಾಸ್ಟೆಲ್ ನಡೆಸುತ್ತಿರುವ ಕನಿಷ್ಟ 25 ಫಲಾನುಭವಿಗಳಿಗಿಂತ ಹೆಚ್ಚಿರುವ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನ್ ಸೇವಾ ಸಂಸ್ಥೆಗಳಿಂದ ಆಹಾರ, ಔಷಧಿ ಮತ್ತಿತರ ವೆಚ್ಚಗಳಿಗೆ ಮತ್ತು ಖಾಸಗಿ ವಸತಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚವನ್ನು ನೀಡುವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಪಾಂಡೇಶ್ವರ ಓಲ್ಡ್‌ಕೆಂಟ್ ರಸ್ತೆಯ ಮೌಲಾನಾ ಆಝಾದ್ ಭವನದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಕಚೇರಿ (ದೂ.ಸಂ: 0824-2211078/2433078) ಅಥವಾ ಆಯಾಯ ತಾಲೂಕಿನ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News