ಮಂಗಳೂರು: ಅಸ್ಮಿ ಸ್ಕೂಲ್ ಆಫ್ ಪೇರೆಂಟಿಂಗ್ ಹೋಪ್ ಉದ್ಘಾಟನೆ
ಮಂಗಳೂರು: ಅಸ್ಮಿ ಸ್ಕೂಲ್ ಆಫ್ ಪೇರೆಂಟಿಂಗ್ ಹೋಪ್ ರಾಷ್ಟ್ರಮಟ್ಟದ ಕಾರ್ಯಕ್ರಮದ ಉದ್ಘಾಟನೆಯು ಶನಿವಾರ ಕಣ್ಣೂರು ಬೋರುಗುಡ್ಡೆಯ ಅಲಿಫ್ ಇಸ್ಲಾಮಿಕ್ ಪ್ರೀ ಸ್ಕೂಲ್‌ನಲ್ಲಿ ನಡೆಯಿತು.
ಜಾವಾದ್ ಇರ್ಫಾನಿ ದುಆಗೈದರು. ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಕಣ್ಣೂರು ಬೋರುಗುಡ್ಡೆಯ ಉಸ್ಮಾನುಬ್ನು ಅಪ್ಫಾನ್ ಮಸ್ಜಿದ್ ಹಾಗೂ ಮದ್ರಸ ಮತ್ತು ಅಲಿಫ್ ಇಸ್ಲಾಮಿಕ್ ಪ್ರೀ ಸ್ಕೂಲ್‌ನ ಅಧ್ಯಕ್ಷ ಅಬ್ದುಲ್ ಹಮೀದ್ ಕಣ್ಣೂರ್ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಶನ್ ಆಫ್ ಸಮಸ್ತ ಮೈನೋರಿಟಿ ಇನ್‌ಸ್ಟಿಟ್ಯೂಶನ್ ಇದರ ಸಿಇಒ ಅಬ್ದುಲ್ ರಹೀಮ್ ಚುಝಾಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಅತಿಥಿಗಳಾಗಿ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೆ.ಕೆ.ಶಾಹುಲ್ ಹಮೀದ್ ಭಾಗವಹಿಸಿ ಮಾತನಾಡಿದರು.
ಅಸ್ಮಿ ಸ್ಕೂಲ್ ಆಫ್ ಪೇರೆಂಟಿಂಗ್‌ನ ಉಸ್ತುವಾರಿ ನೌಷಾದ್ ಕೆ., ಮಸೀದಿಯ ಜೊತೆ ಕಾರ್ಯದರ್ಶಿ ಅಹ್ಮದ್ ಶರೀಫ್, ಕೋಶಾಧಿಕಾರಿ ಮುಹಮ್ಮದ್ ಸಫ್ವಾನ್, ಸದಸ್ಯ ನಝೀರ್, ಶಿಕ್ಷಕಿಯರಾದ ಸಬೀನ, ಫಾತಿಮಾ, ಮಾಜಿದ, ಫಾತಿಮ ರಯೀಶ, ಆಯಾ ಜಮೀಲ ಸಹಕರಿಸಿದರು.