ಪಚ್ಚನಾಡಿ: ವಿವಾಹಿತೆ ನಾಪತ್ತೆ
ಮಂಗಳೂರು, ಸೆ.13: ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿವಾಹಿತೆಯೊಬ್ಬರು ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ತಾನು 24ರ ಹರೆಯದ ಪತ್ನಿ ಅಶ್ವಿನಿ ಮತ್ತು ಸಹೋದರ ಶಿವು ಜೊತೆ ಪಚ್ಚನಾಡಿ ಶಿವಾಜಿನಗರದ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದೇವೆ. ಪತ್ನಿ ಆಶ್ವಿನಿಯು ಕೆಲಸಕ್ಕಾಗಿ ತಾನು ಕೆಲಸ ಮಾಡುವ ಶುಭ ಎಂಬವರ ಪರಿಚಯದ ನಿತ್ಯಾಧರ್ ಯಾನೆ ವಿನು ಎಂಬಾತನಿಗೆ ರೆಸ್ಯೂಮ್ ಕಳುಹಿಸಿಕೊಟ್ಟಿದ್ದಳು. ಬಳಿಕ ಕೆಲವು ಕಡೆ ಕೆಲಸಕ್ಕಾಗಿ ಶುಭ ಜೊತೆ ಸಂದರ್ಶನಕ್ಕೆ ತೆರಳಿದ್ದರು. ಸೆ.10ರಂದು ಬೆಳಗ್ಗೆ ಇಂಟರ್‌ವ್ಯೆ ಇದೆ ಎನ್ನುತ್ತಾ ಅಶ್ವಿನಿ ಮನೆಯಿಂದ ಹೋಗಿದ್ದಳು. ಆ ದಿನ ಸಂಜೆ ತಾನು ಕೆಲಸದ ನಿಮಿತ್ತ ಪಂಪ್‌ವೆಲ್ ಕಡೆಗೆ ಹೋಗಿದ್ದಾಗ ತನ್ನ ಪತ್ನಿ ಅಶ್ವಿನಿ ನಿತ್ಯಾಧರ್‌ನೊಂದಿಗೆ ಕಾರಿನಲ್ಲಿ ಹೋಗುತ್ತಿರುವುದನ್ನು ನೋಡಿರುವೆ. ಆ ದಿನ ಸಂಜೆ ಆಕೆ ಮನೆಗೆ ಬಂದಿದ್ದಳು. ಸೆ.11ರಂದು ಬೆಳಗ್ಗೆ 10ಕ್ಕೆ ಇಂಟರ್‌ವ್ಯೆಗೆ ಹೋಗಲು ಇದೆ ಎನ್ನುತ್ತಾ ಹೋದವಳು ಈವರೆಗೂ ಮನೆಗೆ ಬಂದಿಲ್ಲ. ಅಶ್ವಿನಿಯು ನಿತ್ಯಾಧರ್‌ನೊಂದಿಗೆ ಹೋಗಿರುವ ಶಂಕೆ ಇದೆ ಎಂದು ನವೀನ್ ದೂರಿನಲ್ಲಿ ತಿಳಿಸಿದ್ದಾರೆ.