ಪಡುಬಿದ್ರೆ: ರಸ್ತೆ ಬದಿಯ ಮನೆಗೆ ಢಿಕ್ಕಿ ಹೊಡೆದ ಗೂಡ್ಸ್ ಟೆಂಪೋ
Update: 2025-12-30 17:22 IST
ಪಡುಬಿದ್ರೆ: ರಾಹೆ 66ರ ಹೆಜಮಾಡಿ ಕನ್ನಂಗಾರ್ ಗರೊಡಿ ಬಳಿ ಗೂಡ್ಸ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ವಾಸ್ತವ್ಯದ ಮನೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಮಂಜತೋಟ ಇಸ್ಮಾಯಿಲ್ ಎಂಬವರ ಮನೆಗೆ ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ವಿಶ್ವ ಟ್ರಾನ್ಸ್ಪೋರ್ಟ್ ವಾಹನವು ತಾಂತ್ರಿಕ ಸಮಸ್ಯೆಯಿಂದ ಢಿಕ್ಕಿ ಹೊಡೆದಿದೆ. ಮನೆಯ ಕೊಣೆಯಲ್ಲಿದ್ದವರು ಪವಾಡ ಸದೃಶ್ಯದಿಂದ ಪಾರಾಗಿದ್ದಾರೆ. ಮನೆಗೆ ಭಾಗಶಃ ಹಾನಿಯಾಗಿದೆ.