×
Ad

ಗ್ರೀನ್ ವೀವ್ ಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ

Update: 2023-09-15 18:50 IST

ಮಂಗಳೂರು: ಕೊಣಾಜೆಯ ಅಡ್ಕರೆಪಡ್ಪುವಿನಲ್ಲಿರುವ ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ವಿದ್ಯಾಸಂಸ್ಥೆ ಜೆಸಿಐ ಮಂಗಳೂರು ತಾಲೂಕು ಘಟಕದ ವತಿಯಿಂದ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರವು ಇತ್ತೀಚೆಗೆ ನಡೆಯಿತು.

ಸಂಸ್ಥೆಯ ಸಂಚಾಲಕ ಪರ್ವೇಝ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಜೆಸಿಐ ಅಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಅರುಣ್ ಪೀಟರ್ ಪಿಂಟೋ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಅರಳಿಸಿ ಹೊರತರುವ ಪ್ರಯತ್ನ ಮಾಡಬೇಕೆಂದು ಹೇಳಿದರು.

ಮಂಗಳೂರು ತಾಲೂಕು ಜೆಸಿಐ ಉಪಾಧ್ಯಕ್ಷ ಧೀರಜ್ ಉದ್ಯಾವರ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಅಬೂಬಕ್ಕರ್ ಕೆ. ಸ್ವಾಗತಿಸಿದರು. ನಮಿತಾ ಬಿ.ಎನ್. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News