×
Ad

ನಿರ್ಮಾಣ ಹಂತದ ಕಟ್ಟಡದ ಸಾಮಗ್ರಿ ಮಾರಾಟ: ದೂರು

Update: 2023-10-18 22:58 IST

ಮಂಗಳೂರು, ಅ.18: ನಿರ್ಮಾಣ ಹಂತದ ಕಟ್ಟಡದ ಸಾಮಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ಪ್ರಕಾಶ್ ಡಿಸಿಲ್ವ ಎಂಬವ ವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ತಾನು ಜನತಾ ಕಾಲನಿಯಲ್ಲಿ ವೇರ್ ಹೌಸ್ ನಿರ್ಮಾಣ ಮಾಡುತ್ತಿದ್ದು ಅದರ ಫ್ಯಾಬ್ರಿಕೇಷನ್ ಕೆಲಸವನ್ನು ಕಿರಣ್ ಎಂಬವರಿಗೆ ನೀಡಿದ್ದೆ. ಅ.16ರಂದು ನಿರ್ಮಾಣ ಹಂತದ ಕಟ್ಟಡವನ್ನು ನೋಡಿದಾಗ ನಿರ್ಮಾಣಕ್ಕೆ ಬೇಕಾದ ಶೇಖರಿಸಿಡಲಾ ಗಿದ್ದ ಸಾಮಗ್ರಿಗಳು ಕಾಣೆಯಾಗಿರುವುದು ಕಂಡು ಬಂತು. ಈ ಬಗ್ಗೆ ಕಿರಣ್ ಬಳಿ ಕೇಳಿದಾಗ ತನ್ನ ಸಬ್ ಕಂಟ್ರಾಕ್ಟರ್ ವಿಕಾಸ್ ಅದನ್ನು ಕತ್ತರಿಸಿ ಜನತಾ ಕಾಲನಿಯ ಗುಜರಿ ಅಂಗಡಿಗೆ ಮಾರಿದ್ದಾಗಿ ತಿಳಿಸಿದ್ದಾರೆ. ಅದರಂತೆ ಗುಜರಿ ಅಂಗಡಿಯವರ ಬಳಿ ಕೇಳಿದಾಗ ಯುವಕನೊಬ್ಬ ಗೋಣಿ ಚೀಲದಲ್ಲಿ ಸ್ಟೀಲ್‌ರಾಡ್‌ಗಳನ್ನು ತಂದು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ 35 ಸಾವಿರ ರೂ. ಆಗಿದೆ ಎಂದು ಪ್ರಕಾಶ್ ಡಿಸಿಲ್ವ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News