×
Ad

ಪ್ರತ್ಯೇಕ ಪ್ರಕರಣ: ಇಬ್ಬರು ಮಹಿಳೆಯರು ಹಾಗೂ ಓರ್ವ ಬಾಲಕ ನಾಪತ್ತೆ

Update: 2023-08-02 20:55 IST

ಸುಬ್ರಹ್ಮಣ್ಯ: ಆಸ್ಪತ್ರೆಗೆ ಬಂದಿದ್ದ ಮಹಿಳೆ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ತಾಯಿ, ಮಗ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಳಿನೆಲೆ ಗ್ರಾಮದ ದೇವಸ್ಯ ಮಾಯಿಲಪ್ಪ ಗೌಡ ಎಂಬವರ ಪುತ್ರಿ ತೀರ್ಥಲತಾ (23) ನಾಪತ್ತೆಯಾದ ಮಹಿಳೆ. ತೀರ್ಥಲತಾ ಅವರನ್ನು ಗದಗ ಜಿಲ್ಲೆಯ ಮುಂಡರಗಿಗೆ ಮದುವೆ ಮಾಡಿ ಕೊಡಲಾಗಿದ್ದು, ಅವರಿಗೆ ಗಂಡು ಮಗು ಇದೆ. ಬಿಳಿನೆಲೆ ಮನೆಯಲ್ಲಿದ್ದ ಅವರು ಜು.31 ರಂದು ಮಧ್ಯಾಹ್ನ ಸುಬ್ರಹ್ಮಣ್ಯದ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಬಂದಿದ್ದೂ ಸಂಜೆಯಾದರೂ ಮನೆಗೆ ಹಿಂತಿರುಗಿರುವುದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಮಹಿಳೆಯ ತಂದೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರಸ ಆಂದ್ರಹಳ್ಳಿ ನಿವಾಸಿ ರಾಜಶೇಖರ್ ಎಂಬವರ ಪತ್ನಿ ಹರ್ಷಿತ (28) ಹಾಗೂ ಮಗ ಭಗತ್ (3) ನಾಪತ್ತೆಯಾದವರು. ರಾಜಶೇಖರ್ ಅವರು ಪತ್ನಿ, ಮಗ ಹಾಗೂ ಸ್ನೇಹಿತರೊಂದಿಗೆ ಜು.31ರಂದು ಸುಬ್ರಹ್ಮಣ್ಯ ದೇವಸ್ಥಾಕ್ಕೆ ಬಂದಿದ್ದು, ಮಧ್ಯಾಹ್ನ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಬಳಿಕ ಖರೀದಿಗೆ ಅಂಗಡಿಗೆ ತೆರಳಿದ್ದು, ಈ ವೇಳೆ ರಾಜಶೇಖರ್ ಅವರ ಪತ್ನಿ, ಮಗ ನಾಪತ್ತೆಯಾಗಿದ್ದು, ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದ್ದು, ನಾಪತ್ತೆ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News