ಸೂರಲ್ಪಾಡಿ: ಅಲ್‌ಖೈರ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕಿಯರ ಪ್ರಮಾಣ ವಚನ
ಮಂಗಳೂರು, ಜು.30: ಸೂರಲ್ಪಾಡಿಯ ಅಲ್‌ಖೈರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕಿಯರ ಪ್ರಮಾಣವಚನ ಮತ್ತು ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಅರಬಿಕ್ ಶಿಕ್ಷಕ ಶಂಸುದ್ದೀನ್ ಹುದವಿ ದುಆಗೈದರು. ಶಾಲೆಯ ಸಂಚಾಲಕ ಶಂಸುದ್ದೀನ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಮುಸ್ತಾಕ್ ಸಾದ್, ಕಾರ್ಯದರ್ಶಿ ಶೈಖ್ ಮುಖ್ತಾರ್, ಗೌರವಾಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಸಲಹೆಗಾರ ಅಲಿ ಅಬ್ಬಾಸ್, ಮಲ್ಹರುಲ್ ಅವಾಖಿಫ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಸಾಗರ್, ಕೆಎಸ್‌ಎ ಘಟಕದ ಮಾಜಿ ಅಧ್ಯಕ್ಷ ಅನ್ವರ್ ಸಾದಾತ್, ಜೊತೆ ಕಾರ್ಯದರ್ಶಿ ಅಶ್ರಫ್, ಕೋಶಾಧಿಕಾರಿ ಶರೀಫ್, ಗ್ರಾಪಂ ಸದಸ್ಯ ಆರ್.ಎಸ್. ಇರ್ಫಾನ್, ಅಲ್ ಖೈರ್‌ನ ಟ್ರಸ್ಟಿ ಅಬ್ದುಲ್ ಖಾದರ್ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಕಲಂದರ್ ಬೀವಿ "ನಾಯಕತ್ವದ ಮಹತ್ವ" ಮತ್ತು ಅರಬಿಕ್ ವಿಭಾಗದ ಮುಖ್ಯಸ್ಥ ದಾವೂದ್ ಹುದವಿ "ಶಿಸ್ತು, ನೈತಿಕತೆ ಮತ್ತು ಧಾರ್ಮಿಕ ಪ್ರಾಮುಖ್ಯತೆ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಶಾಲಾ ನಾಯಕಿಯಾಗಿ ಅನುಮ್, ಉಪನಾಯಕಿಯಾಗಿ ಮಹಿಷಾ ಸಾದ್ , ಶುಚಿತ್ವ ವಿಭಾಗದ ನಾಯಕಿಯಾಗಿ ರುಷ್ದಾ ಬಾಜಿ, ಕ್ರೀಡಾ ವಿಭಾಗದ ನಾಯಕಿಯಾಗಿ ಇಫ್ಫಾ, ಶಿಸ್ತು ವಿಭಾಗದ ನಾಯಕಿಯಾಗಿ ಐಝಾ ಪ್ರಮಾಣವಚನ ಸ್ವೀಕರಿಸಿದರು.
ಶಿಕ್ಷಕಿಯರಾದ ಫರ್ಝಾನಾ ಕಾರ್ಯಕ್ರಮ ನಿರೂಪಿಸಿದರು. ಅಶ್ರಿಫಾ ವಂದಿಸಿದರು.