×
Ad

ಸುರತ್ಕಲ್‌ | ಸೇವಾ ವೃಂದ ( ರಿ ) ವತಿಯಿಂದ 60ನೇ ವರ್ಷದ ಮೊಸರುಕುಡಿಕೆ ಉತ್ಸವ

Update: 2025-09-16 13:08 IST

ಸುರತ್ಕಲ್ : ಇಲ್ಲಿನ ಕರ್ನಾಟಕ ಸೇವಾ ವೃಂದ ( ರಿ ) ಸುರತ್ಕಲ್ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 60ನೇ ವರ್ಷದ ಮೊಸರು ಕುಡಿಕೆ ಉತ್ಸವವು ಸೋಮವಾರ ರಾತ್ರಿ ಕರ್ನಾಟಕ ಸೇವಾ ವೃಂದದಲ್ಲಿ ನಡೆಯಿತು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಸಮಾರಂಭವನ್ನು ಉದ್ಘಾಟಿಸಿದರು. ಆರ್‌ಪಿ‌ಎಲ್–ಓಎನ್‌ಜಿಸಿ ಪ್ರಬಂಧಕ ಜಯೇಶ್ ಗೋವಿಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಈ ವೇಳೆ ನಡೆದ ಮುದ್ದು ಕೃಷ್ಣ ಸ್ಪರ್ಧೆಯ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಸಂಘದ ಹಿರಿಯ ಸದಸ್ಯರಾದ ಓಮ್ ಪ್ರಕಾಶ ಶೆಟ್ಟಿಗಾರ್, ಮುರಳಿ ಎಚ್., ಹರೀಶ್ ಕರ್ನಿರೆ, ರಘು ಶೆಟ್ಟಿ, ಮೋಹನ್ ಐ., ಯೋಗೀಶ್ ಕಾಟಿಪಳ್ಳ ಮೊದಲಾದವರಿಗೆ ಸನ್ಮಾನ ಸಲ್ಲಿಸಲಾಯಿತು.

ಎಂ.ಆರ್.ಪಿ.ಎಲ್ ನ ನಿವೃತ್ತ ಜಿ.ಎಂ. ರೋಬರ್ಟ್ ಫಾವುಲ್ ಡಿ'ಸೋಜ, ನಿವೃತ್ತ ಡೈರೆಕ್ಟರ್ ಎಂ. ಸುದರ್ಶನ್, ಬಿ.ಎ.ಎಸ್.ಎಫ್. ಇಂಡಿಯಾ ಲಿ. ನ ಸೈಡ್ ಡೈರೆಕ್ಟರ್ ಶ್ರೀನಿವಾಸ್ ಪ್ರಾಣೇಶ್, ದ.ಕ. ಅಮೆಚೂರು ಕುಸ್ತಿ ಸಂಘ ಟ್ರಸ್ಟ್ ಕದ್ರಿ ಅಧ್ಯಕ್ಷ ದಿಲ್‌ರಾಜ್ ಆಳ್ವ, ಉದ್ಯಮಿ ಸುನಿಲ್‌ ಜೋನ್ಸ್, ನಿವೃತ್ತ ಸುಭೇದರ್ ಮೇಜರ್ ಸುರೇಶ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ವ್ಯವಸ್ಥಾಪಕ ರಾಜೇಶ್ ಗುಜರನ್ ಪಾವೂರು, ಕರ್ನಾಟಕ ಬ್ಯಾಂಕ್ ಪಡುಬಿದ್ರಿ ಶಾಖಾ ಪ್ರಬಂಧಕ ಪ್ರವೀಣ್ ಕುಮಾರ್ ಶೆಟ್ಟಿ, ಮುಂಬೈ ಉದ್ಯಮಿಗಳಾದ ಕುಶಲ ಭಂಡಾರಿ, ವೇಣುಗೋಪಾಲ ಶೆಟ್ಟಿ, ಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News