ಸುರತ್ಕಲ್ | ಜನರಲ್ ಸ್ಟೋರ್ ಮಾಲಕ ಕಾಣೆ
Update: 2025-11-28 17:20 IST
ಮಂಗಳೂರು, ನ.28: ಸುರತ್ಕಲ್ ಇಡ್ಯದ ಅಲ್ ಶಿಫಾ ಜನರಲ್ ಸ್ಟೋರ್ ಮಾಲಕ ಶೇಖಬ್ಬ (61)ಎಂಬವರು ನವೆಂಬರ್ 27ರಿಂದ ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂದಿನಂತೆ ಬೆಳಗ್ಗೆ ತನ್ನ ಮನೆ ಸಮೀಪದ ಜನರಲ್ ಸ್ಟೋರ್ ನ ಬಾಗಿಲು ತೆರೆಯಲು ಹೋಗಿದ್ದರು. ಆದರೆ ಅವರು ತನ್ನ ಸ್ಟೋರ್ಗೂ ಹೋಗದೆ, ಮನೆಗಳೂ ಮರಳಿ ಬಾರದೆ ಕಾಣೆಯಾಗಿರುವುದಾಗಿ ಶೇಖಬ್ಬರ ಸಹೋದರ ಅಬ್ದುಲ್ ಖಾದರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
5.9 ಅಡಿ ಎತ್ತರದ, ಸಾಧಾರಣ ಶರೀರದ ಇವರು ಕನ್ನಡ, ಬ್ಯಾರಿ, ತುಳು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ಕೆಂಪುಬಣ್ಣದ ಟೀಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರನ್ನು ಕಂಡವರು ಸುರತ್ಕಲ್ ಠಾಣೆ (0824-2220540) ಅಥವಾ ಮಂಗಳೂರು ನಗರ ಕಂಟ್ರೋಲ್ ರೂಂ (0824-2220800/9480802321)ಗೆ ಮಾಹಿತಿ ನೀಡಲು ಠಾಣಾಧಿಕಾರಿ ಮನವಿ ಮಾಡಿದ್ದಾರೆ.