ದ.ಕ.ಜಿಲ್ಲಾ ಡಿಡಿಪಿಐಗೆ ವರ್ಗಾವಣೆ
Update: 2025-08-06 20:11 IST
ಮಂಗಳೂರು, ಆ.6: ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಗೋವಿಂದ ಮಡಿವಾಳ ಅವರನ್ನು ಬೆಂಗಳೂರಿನ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರ ಹುದ್ದೆಗೆ ವರ್ಗಾವಣೆಯಾಗಿದೆ.
ದ.ಕ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್)ಪ್ರಾಂಶುಪಾಲೆ ಕೆ. ರಾಜಲಕ್ಷ್ಮಿಅವರನ್ನು ಮೈಸೂರಿನ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆಯಾಗಿ ವರ್ಗಾಯಿಸಲಾಗಿದೆ.