×
Ad

ದ್ವಿಚಕ್ರ ವಾಹನಗಳು ಢಿಕ್ಕಿ: ಇಬ್ಬರಿಗೆ ಗಾಯ

Update: 2023-09-20 22:48 IST

ಮಂಗಳೂರು: ಎರಡು ಸ್ಕೂಟರ್‌ಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮವಾಗಿ ಒಂದು ಸ್ಕೂಟರ್‌ನಲ್ಲಿದ್ದ ಸವಾರ ಮತ್ತು ಸಹಸವಾರೆ ಗಾಯಗೊಂಡ ಘಟನೆ ಕುಲಶೇಖರ್ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ಮೂಡಬಿದ್ರೆಯ ಪ್ರಶಾಂತ್ ಎಂಬವರು ಮಂಗಳವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ತನ್ನ ತಾಯಿ ಭಾರತಿ ಅವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಮಂಗಳೂರು ಕಡೆಗೆ ಹೊರಟು ಸಮಯ ಕುಲಶೇಖರ ಮಿಲ್ಕ್ ಡೈರಿ ಬಳಿ ತಲುಪಿದಾಗ ಎದುರು ಕಡೆಯಿಂದ ಬಂದ ಸ್ಕೂಟರ್ ಸವಾರನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸ್ಕೂಟರನ್ನು ಚಲಾಯಿಸಿಕೊಂಡು ಬಂದು ಏಕಾಏಕಿ ಸ್ಕೂಟರನ್ನು ತಿರುಗಿಸಿ ಪ್ರಶಾಂತರ ಸ್ಕೂಟರಿಗೆ ಢಿಕ್ಕಿ ಹೊಡೆದು ಪರಾರಿಯಾದ ಎನ್ನಲಾಗಿದೆ.

ಪ್ರಶಾಂತ್ ಮತ್ತು ತಾಯಿ ಭಾರತಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಟ್ರಾಫಿಕ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News