×
Ad

ಉಳ್ಳಾಲ : ವೀರ ರಾಣಿ ಅಬ್ಬಕ್ಕ ಉತ್ಸವ ಕಾರ್ಯಕ್ರಮ

Update: 2025-02-22 15:08 IST

ಉಳ್ಳಾಲ : ವೀರ ರಾಣಿ ಅಬ್ಬಕ್ಕ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಯಾರಿಗೂ ಗೊತ್ತಿರಲಿಲ್ಲ. ಅಬ್ಬಕ್ಕ ಐನೂರು ವರ್ಷಗಳ ಹಿಂದೆ ದೇಶವನ್ನು ಆಳಿದ ಮಹಿಳೆ. ಆದರೆ ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಯಂತೆ ಅಬ್ಬಕ್ಕಳ ಚರಿತ್ರೆ ಇರಲಿಲ್ಲ ಎಂದು ಮೂಡುಬಿದಿರೆ ಚೌಟರ ಅರಮನೆಯ ಅಬ್ಬಕ್ಕ ವಂಶಸ್ಥ ಮಮತಾ ಬಳ್ಳಾಲ್ ಹೇಳಿದರು.

ಅವರು ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಉಳ್ಳಾಲ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ನಡೆದ ಅಬ್ಬಕ್ಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಬ್ಬಕ್ಕ  ತುಳುನಾಡಿನಲ್ಲಿ ಆಳ್ವಿಕೆ ನಡೆಸಿ ಪೋರ್ಚುಗೀಸರ ಹುಟ್ಟಡಗಿಸಿದರೂ ಅವರಿಗೆ ಈ ದೇಶದಲ್ಲಿ 200ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ ರಾಣಿಯರಂತೆ ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಸಿಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಹಲವು ದಶಕಗಳ ಹಿಂದಿನಿಂದಲೂ ಇತರ ರಾಣಿಯರ ಕುರಿತಾಗಿ ಸಿಕ್ಕಂತೆ ಪುಸ್ತಕ ರೂಪದಲ್ಲಿ ಪ್ರಚಾರ ಸಿಗದಿರುವುದು ದುರಂತ. ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಪುಸ್ತಕ, ಯಕ್ಷಗಾನ, ನಾಟಕ, ಸಿಡಿ, ಕಾರ್ಯಗಾರ, ಅಧ್ಯಯನ ಪೀಠ, ನೌಕೆಯೊಂದಕ್ಕೆ ಹೆಸರಿಡುವ ಮೂಲಕ ಹೆಚ್ಚಿನ ಪ್ರಚಾರ ನೀಡುವ ಪ್ರಯತ್ನ ನಡೆದಿದೆ ಎಂದರು.

ಸಾಹಿತ್ಯಿಕ ,ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು‌  ಪೊರ್ಚುಗೀಸರ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅಬ್ಬಕ್ಕಳ  ಚರಿತ್ರೆ ಇತಿಹಾಸ ಪುಸ್ತಕ ಸೇರಬೇಕು. ಅವರ ಇತಿಹಾಸ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ. ಅಬ್ಬಕಳ ಹೆಸರಿನಲ್ಲಿ ಒಂದು ಲಕ್ಷ ಪ್ರೋತ್ಸಾಹ ಧನ ಜೊತೆ ಅರ್ಹ ಮಹಿಳೆಯೊಬ್ಬರಿಗೆ ಪ್ರಶಸ್ತಿ ಕೊಡುವ ಕೆಲಸ ಆಗಬೇಕು ಎಂದು ಹೇಳಿದರು.

ನಗರ ಸಭೆ ಅಧ್ಯಕ್ಷ ಶಶಿ ಕಲ ವಿವಿಧ ಗೋಷ್ಠಿಗಳ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷ ಚಂಚಲ ತೇಜೋಮಯ , ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಆಳ್ವ ಮಾತನಾಡಿದರು.

ವೀರ ರಾಣಿ ಅಬ್ಬಕ್ಕ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಜಯರಾಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಸಭೆ ಉಪಾಧ್ಯಕ್ಷ ಸಪ್ನಾ ಹರೀಶ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮ ಪ್ರಯುಕ್ತ ಮಾಸ್ತಿಕಟ್ಟೆ ಭಾರತ್ ಸ್ಕೂಲ್ ನಿಂದ ಮಹಾತ್ಮ ಗಾಂಧಿ ರಂಗ ಮಂದಿರದವರೆಗೂ ಜಾನಪದ ದಿಬ್ಬಣ ನಡೆಯಿತು.

ಕಾರ್ಯಕ್ರಮ ದಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ ಉಚ್ಚಿಲ, ನಗರ ಸಭೆ ಪೌರಾಯುಕ್ತ ಮತಡಿ, ಮೊಗವೀರ ಸಂಘದ ಅಧ್ಯಕ್ಷ ಯಶವಂತ ಅಮೀನ್, ಟಿ.ಎಸ್.ಅಬ್ದುಲ್ಲ, ಹೈದರ್ ಪರ್ತಿಪ್ಪಾಡಿ, ಸಿಡಿಪಿಓ ಹರೀಶ್, ಟಿಎಸ್ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ , ಸದಾನಂದ ಬಂಗೇರ, ಆಲಿಯಬ್ಬ, ಸೀತಾರಾಂ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತಿ ಉಳ್ಳಾಲ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News