ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ: ಪ್ರಕರಣ ದಾಖಲು
Update: 2025-10-08 17:01 IST
ಮಂಗಳೂರು, ಅ.8: ನಗರದ ಜೈಲಿನಲ್ಲಿ ವಿಚಾರಣಾಧೀನ ಕೈದಿಯೋರ್ವನಿಗೆ ಅದೇ ಜೈಲಿನಲ್ಲಿರುವ ಐವರು ವಿಚಾರಣಾಧೀನ ಕೈದಿಗಳು ಹಲ್ಲೆ ನಡೆಸಿರುವ ಘಟನೆ ಅ.3ರಂದು ನಡೆದಿರುವುದು ವರದಿಯಾಗಿದೆ.
ವಿಟ್ಲ ಕಾನತ್ತಡ್ಕದ ಮುಹಮ್ಮದ್ ಇರ್ಷಾದ್ (27) ಹಲ್ಲೆಗೊಳಗಾದ ವಿಚಾರಣಾಧೀನ ಕೈದಿ ಎಂದು ಪೊಲೀಸರು ತಿಳಿಸಿದ್ದಾರೆ.
ಹಣದ ವಿಚಾರವಾಗಿ ಈತನಿಗೆ ಐದು ಮಂದಿಯ ತಂಡ ಹಲ್ಲೆ ನಡೆಸಿದೆ. ಜೈಲು ಅಧೀಕ್ಷಕರು ಕೈದಿಗಳ ಆರೋಗ್ಯ ವಿಚಾರಿಸುತ್ತಿದ್ದ ಸಂದರ್ಭ ಇರ್ಷಾದ್ ಮೇಲೆ ಹಲ್ಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಗಾಯಾಳು ಇರ್ಷಾದ್‌ನನ್ನು ನಗರದ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.