ವಿಟ್ಲ: ಪೊನ್ನೋಟಿಯಲ್ಲಿ ʼಮನೆ ಮನೆ ಬ್ಯಾರಿ ಕವಿಗೋಷ್ಠಿʼ
ವಿಟ್ಲ, ಜ.20: ಮಕ್ಕಳು ಪಾಶ್ಚಾತ್ಯ ಭಾಷೆಗಳನ್ನು ಒಳಗೊಂಡಂತೆ ಹಲವು ಭಾಷೆಗಳನ್ನು ಕಲಿಯಲಿ. ಆದರೆ ಆ ಭಾಷೆಗಳ ಸಂಸ್ಕೃತಿಗಳು ಬ್ಯಾರಿ ಸಂಸ್ಕೃತಿಯ ಮೇಲೆ ದಾಳಿ ಮಾಡದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ವಿಟ್ಲದ ಪೊನ್ನೋಟಿನಲ್ಲಿರುವ ಅಕಾಡಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಅವರ ಮನೆಯ ಅಂಗಳದಲ್ಲಿ ಹಮ್ಮಿಕೊಂಡಿದ್ದ ’ಮನೆ ಮನೆ ಬ್ಯಾರಿ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕವಿಗಳಾದ ಡಾ. ಮುಫಿದಾ ಜುವೈರಿಯಾ, ರಝಿಯಾ ಇರ್ವತ್ತೂರು, ಕೆ.ಎ. ಅಬ್ದುಲ್ ಅಝೀಝ್ ಪುಣಚ, ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಅಶ್ರಫ್ ಅಪೋಲೋ, ಸಲೀಂ ಬೋಳಂಗಡಿ ಕವನ ವಾಚಿಸಿದರು. ರಾಯಲ್ ಅಕಾಡಮಿಯ ಸಂಚಾಲಕಿ ರಾಝಿಯಾ ಮುಖ್ತಾರ್ ಕವಿಗೋಷ್ಠಿ ನಿರೂಪಿಸಿದರು.
ಅಕಾಡಮಿ ಸದಸ್ಯೆ ಸಾರಾ ಅಲಿ ಪರ್ಲಡ್ಕ, ವಿಟ್ಲ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ವಿ.ಎಚ್. ಅಶ್ರಫ್ ಹಾಜಿ, ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ, ಅಕಾಡಮಿಯ ಮಾಜಿ ಸದಸ್ಯ ಪಿ. ಮುಹಮ್ಮದ್, ಪರ್ತಕರ್ತರಾದ ಹನೀಫ್ ಅನಿಲಕಟ್ಟೆ ಮುಖಂಡರಾದ ಕೆ.ಎಸ್. ಹಮೀದ್, ಅಬ್ದುಲ್ ಖಾದರ್ ಕುಕ್ಕಾಜೆ, ಇಶಾಕ್ ವಿಟ್ಲ, ಬಶೀರ್ ಅಹ್ಮದ್ , ಲತೀಫ್ ಅನಿಲಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಅಕಾಡಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ವಂದಿಸಿದರು.