ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ತನ್ವೀರ್ ಅಹ್ಮದುಲ್ಲಾಗೆ ಸ್ವಾಗತ
Update: 2025-11-18 23:49 IST
ಬೆಳ್ತಂಗಡಿ, ನ.18: ಧರ್ಮಸ್ಥಳ ಸರ್ವಧರ್ಮ ಸಮ್ಮೇಳನದ ಉಪನ್ಯಾಸಕ ತನ್ವೀರ್ ಅಹ್ಮದುಲ್ಲಾ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಅವರನ್ನು ಪ್ರವೇಶದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.
ಹೆಗ್ಗಡೆಯವರೊಂದಿಗೆ ತನ್ನ ಅನುಭವ ಹಂಚಿಕೊಂಡ ತನ್ವೀರ್, ದಾರಿಯುದ್ಧಕ್ಕೂ ಹೆಗ್ಗಡೆ ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಜನರ ಶ್ರದ್ಧಾ-ಭಕ್ತಿ ಹಾಗೂ ಅಭಿಮಾನದ ಮಾತುಗಳನ್ನು ಆಲಿಸಿ ಸಂತಸವಾಯಿತು ಎಂದು ಹೇಳಿದರು.