×
Ad

ಮಣಿಪುರ: 10 ಮಂದಿ ಉಗ್ರರ ಬಂಧನ

Update: 2025-04-27 20:37 IST

Photo Credit: PTI

ಇಂಫಾಲ: ಜನಾಂಗೀಯ ಸಂಘರ್ಷದಿಂದ ಪೀಡಿತವಾದ ಮಣಿಪುರ ರಾಜ್ಯದ ಇಂಫಾಲ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಲ್ಲಿ ವಿವಿಧ ನಿಷೇಧಿತ ಸಂಘಟನೆಗಳ 10 ಮಂದಿ ಉಗ್ರರನ್ನು ಭದ್ರತಾಪಡೆಗಳು ರವಿವಾರ ಬಂಧಿಸಿವೆ.

ಸಂಯುಕ್ತ ರಾಷ್ಟ್ರೀಯ ವಿಮೋಚನಾ ರಂಗ (ಪಾಂಬೆಯಿ) ಹಾಗೂ ಅವರ ಸಹಚರನನ್ನು ಇಂಫಾಲ ಪೂರ್ವ ಜಿಲ್ಲೆಯಲ್ಲಿರುವ ವಾಂಗ್ಖೆಯಿ ತಂಗಾಪತ್ ಮಾಪನ್ ಎಂಬಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿರುವ ಲಾಂಫೆಲ್ಪಟ್ ನಲ್ಲಿ ನಿಷೇಧಿತ ಪಿಆರ್ಇಪಿಎಕೆ(ಪಿಆರ್ಓ)ಯ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ. ಕಾಂಗ್ಲೆಯಿಪಕ್ ಕಮ್ಯೂನಿಸ್ಟ್ ಪಕ್ಷದ (ಪಿಡಬ್ಲ್ಯುಜಿ) ಐದು ಮಂದಿ ಕಾರ್ಯಕರ್ತರನ್ನು ಇಂಫಾಲದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ ಕಾಕ್ಚಿಂಗ್ ಜಿಲ್ಲೆಯ ಮೊಲ್ಟಿನ್ಚಾಮ್ ಗ್ರಾಮದಲ್ಲಿ ನಡೆದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಬಂದೂಕುಗಳು, ರೈಫಲ್ಗಳು ಹಾಗೂ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News