×
Ad

Bihar: ನಿರ್ಮಾಣ ಹಂತದ ರೋಪ್‌ ವೇ ಕುಸಿತ

Update: 2025-12-26 21:40 IST

Photo Credit : newindianexpress.com

ಪಾಟ್ನಾ, ಡಿ. 26: ಬಿಹಾರದ ರೋಹ್ತಾಕ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೋಪ್ ವೇ ಶುಕ್ರವಾರ ಕುಸಿದು ಬಿದ್ದಿದೆ. ಇದರಿಂದಾಗಿ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ.

ಈ ರೋಪ್ ವೇಯನ್ನು ಜನವರಿ 1ರಂದು ಪ್ರವಾಸಿಗರಿಗಾಗಿ ತೆರೆಯಲು ನಿರ್ಧರಿಸಲಾಗಿತ್ತು.

ಈ ಘಟನೆಯಲ್ಲಿ ರೋಪ್‌ ವೇಯ ಕಂಬಗಳು ಹಾಗೂ ಟ್ರಾಲಿಗಳಿಗೆ ಹಾನಿ ಉಂಟಾಗಿದೆ. ಆದರೆ, ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಬಿಹಾರದ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾದ ರೋಹ್ತಾಸ್‌ಗಢ ಎಂದು ಜನಪ್ರಿಯವಾಗಿರುವ ರೋಹ್ತಾಸ್ ಕೋಟೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ರೋಪ್ ವೇ ನಿರ್ಮಿಸಲಾಗುತ್ತಿತ್ತು. ರೋಹ್ತಾಸ್ ಕೋಟೆ ಸಮುದ್ರ ಮಟ್ಟದಿಂದ ಸುಮಾರು 1,400 ಅಡಿ ಎತ್ತರದಲ್ಲಿದೆ.

ಈ ಯೋಜನೆ ಅಂತಿಮ ಹಂತದಲ್ಲಿತ್ತು. ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿರುವಾಗ ದುರಂತ ಸಂಭವಿಸಿದೆ.

‘‘ನಿರ್ಮಾಣ ಹಂತದಲ್ಲಿರುವ ರೋಪ್‌ವೇ ಯ ತಾಂತ್ರಿಕ ದೋಷಕ್ಕೆ ಕಾರಣವನ್ನು ಕಂಡು ಹಿಡಿಯಲಾಗುತ್ತಿದೆ’’ ಎಂದು ರೋಹ್ತಾಸ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News