×
Ad

ವಾರ್ಷಿಕ ಆಸ್ತಿ ವಿವರಗಳನ್ನು ಸಲ್ಲಿಸದಿದ್ದರೆ ಕ್ರಮ: ಕೇಂದ್ರ ಎಚ್ಚರಿಕೆ

Update: 2025-12-26 21:29 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ, ಡಿ. 26: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳು ತಮ್ಮ ವಾರ್ಷಿಕ ಆಸ್ತಿ ವಿವರಗಳನ್ನು ಸಕಾಲದಲ್ಲಿ ಸಲ್ಲಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ವಿಳಂಬ ಮಾಡಿದರೆ ಬಡ್ತಿ ನಿರಾಕರಣೆ ಸೇರಿದಂತೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ.

ಸೇವಾ ನಿಯಮಗಳ ಪ್ರಕಾರ ಐಎಎಸ್ ಅಧಿಕಾರಿಗಳು ಮುಂದಿನ ವರ್ಷದ ಜನವರಿ 31ರ ಒಳಗೆ ತಮ್ಮ ಸ್ಥಿರ ಆಸ್ತಿ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಇದನ್ನು ಪಾಲಿಸಲು ವಿಫಲವಾದರೆ ಗಂಭೀರ ಲೋಪವೆಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯದ ಸಿಬ್ಬಂದಿ ಹೇಳಿದ್ದಾರೆ.

ಮುಂದಿನ ವೇತನ ಶ್ರೇಣಿಗೆ ನೌಕರರನ್ನು ಪರಿಗಣಿಸಬೇಕಾದರೆ ಸ್ಥಿರಾಸ್ಥಿಗಳ ವಿವರ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News