ದೋಹಾದಿಂದ ಕೊಚ್ಚಿಗೆ ಹಾರುತ್ತಿದ್ದ ವಿಮಾನದಲ್ಲಿ 11 ತಿಂಗಳ ಶಿಶು ಮೃತ್ಯು
Update: 2025-01-21 16:37 IST
ಸಾಂದರ್ಭಿಕ ಚಿತ್ರ (PTI)
ಕೊಚ್ಚಿ: ಖತರ್ ನ ದೋಹಾದಿಂದ ಕೊಚ್ಚಿಗೆ ಹಾರುತ್ತಿದ್ದ ವಿಮಾನದಲ್ಲಿ ಮಲಪ್ಪುರಂನ 11 ತಿಂಗಳ ಗಂಡು ಶಿಶುವೊಂದು ಕೊನೆಯುಸಿರೆಳೆದಿದೆ.
ಫೆಝಿನ್ ಅಹಮ್ಮದ್ ಮೃತ ಮಗು. ತನ್ನ ತಾಯಿಯೊಂದಿಗೆ ಗಲ್ಫ್ ಏರ್ ವಿಮಾನದಲ್ಲಿ ತೆರಳುತ್ತಿದ್ದ ಮಗು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದೆ. ವಿಮಾನ ಕೊಚ್ಚಿಯಲ್ಲಿ ಲ್ಯಾಂಡಿಂಗ್ ಆದ ತಕ್ಷಣ ಮಗುವನ್ನು ಅಂಗಮಾಲಿ ಲಿಟಲ್ ಫ್ಲವರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರಿಶೀಲನೆ ನಡೆಸಿ ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಮಗುವಿಗೆ ಹೃದಯದ ತೊಂದರೆಗಳಿದ್ದು, ಚಿಕಿತ್ಸೆಗಾಗಿ ತವರು ರಾಜ್ಯಕ್ಕೆ ಕರೆದೊಯ್ಯುತ್ತಿದ್ದಾಗ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಕುರಿತು ಅಂಗಮಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.