×
Ad

ಅಮೆರಿಕಕ್ಕೆ ಭಾರತದ ದತ್ತಾಂಶಗಳ ಹಸ್ತಾಂತರ: ರಾಹುಲ್ ಗಾಂಧಿ ಆರೋಪ

Update: 2026-03-07 20:53 IST

 ರಾಹುಲ್ ಗಾಂಧಿ | Photo Credit : PTI 

ತಿರುವನಂತಪುರ, ಮಾ.7: ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದದ ಬಳಿಕ ಭಾರತದ ದತ್ತಾಂಶ ಸಂಪನ್ಮೂಲಗಳನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಇಲ್ಲಿ ಆರೋಪಿಸಿದರು.

ದತ್ತಾಂಶದ ಒಡೆತನ ಮತ್ತು ರಕ್ಷಣೆಯಂತಹ ಪ್ರಮುಖ ವಿಷಯಗಳು ಸಾಕಷ್ಟು ಗಮನ ಪಡೆಯುತ್ತಿಲ್ಲ. ಆದರೆ ಸಾರ್ವಜನಿಕ ಚರ್ಚೆಗಳು ಕಡಿಮೆ ಮಹತ್ವದ ವಿಷಯಗಳ ಮೇಲೆ ಕೇಂದ್ರೀಕರಿಸಿವೆ ಎಂದು ಅವರು ಹೇಳಿದರು.

ಇಲ್ಲಿಯ ಟೆಕ್ನೋ ಪಾರ್ಕ್‌ನಲ್ಲಿ ಮಾಹಿತಿ ತಂತ್ರಜ್ಞಾನ ಸಮುದಾಯದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್, ಸಬ್ಸಿಡಿಗಳು ಮತ್ತು ಉಚಿತ ಕೊಡುಗೆಗಳ ಕುರಿತು ವ್ಯಾಪಕ ಚರ್ಚೆಗೆ ಕರೆಯನ್ನೂ ನೀಡಿದರು. ದೊಡ್ಡ ಕಾರ್ಪೊರೇಟ್ ಸಮೂಹಗಳಿಗೆ ನೀಡುವ ಪ್ರಯೋಜನಗಳನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ ಬಡವರಿಗೆ ನೀಡುವ ನೆರವನ್ನು ಯಾಕೆ ಟೀಕಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ದತ್ತಾಂಶ ಸಂರಕ್ಷಣೆ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ತಾನು ಹಿಂದೆ ಟೀಕಿಸಿದ್ದ ಭಾರತ–ಅಮೆರಿಕ ಒಪ್ಪಂದವನ್ನು ಉಲ್ಲೇಖಿಸಿ, ಭಾರತವು ಮಾತುಕತೆಗಳ ಸಮಯದಲ್ಲಿ ತನ್ನ ದತ್ತಾಂಶಗಳ ಮೌಲ್ಯವನ್ನು ಬಳಸಿಕೊಳ್ಳಲು ವಿಫಲವಾಗಿದೆ ಎಂದು ವಾದಿಸಿದರು.

ಯಶಸ್ವಿ ಮಾತುಕತೆಗಳು ಒಬ್ಬರ ಸ್ವಂತ ಸಾಮರ್ಥ್ಯಗಳನ್ನು ಗುರುತಿಸುವುದರ ಮೇಲೆ ಅವಲಂಬಿಸಿವೆ ಎಂದ ರಾಹುಲ್, ‘ನಮ್ಮಲ್ಲಿ ಅಗಾಧ ವೈವಿಧ್ಯವಿದೆ. ಹೀಗಾಗಿ ನಾವು ಹಲವಾರು ವಿಭಿನ್ನ ವಿಷಯಗಳನ್ನು ಹಲವಾರು ವಿಭಿನ್ನ ಕೋನಗಳಿಂದ ಅರ್ಥ ಮಾಡಿಕೊಳ್ಳಬಲ್ಲೆವು. ಈ ಜಗತ್ತಿನಲ್ಲಿ ಅತಿ ದೊಡ್ಡ ದತ್ತಾಂಶಗಳ ರಾಶಿ ನಮ್ಮ ಬಳಿಯಿದೆ. ನಾವು ಅತ್ಯುತ್ತಮ ಇಂಜಿನಿಯರಿಂಗ್ ಪ್ರತಿಭೆಯನ್ನು ಹೊಂದಿದ್ದೇವೆ. ನಮ್ಮ ಬಳಿ ಅತ್ಯುತ್ತಮ ವೈದ್ಯಕೀಯ ಪ್ರತಿಭೆಯಿದೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News