×
Ad

ಕೋಲ್ಕತ್ತಾ: 150 ವರ್ಷಗಳ ಇತಿಹಾಸವಿರುವ ಟ್ರಾಮ್ ರೈಲು ಸಂಚಾರ ಸ್ಥಗಿತ

Update: 2024-09-30 13:52 IST

Photo: PTI

ಕೋಲ್ಕತ್ತಾ: ಎಸ್ ಪ್ಲನೇಡ್ ನಿಂದ ಮೈದಾನದವರೆಗಿನ ಟ್ರಾಮ್ ರೈಲು ಸಂಚಾರವನ್ನು ಹೊರತುಪಡಿಸಿ, ಕೋಲ್ಕತ್ತಾದಲ್ಲಿನ ಎಲ್ಲ ಮಾರ್ಗಗಳ ಟ್ರಾಮ್ ರೈಲು ಸೇವೆಯನ್ನು ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರಕಾರ ನಿರ್ಧರಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೋಲ್ಕತ್ತಾದಲ್ಲಿನ ಟ್ರಾಮ್ ರೈಲು ಸೇವೆಗೆ 150 ವರ್ಷಗಳ ಇತಿಹಾಸವಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ, “ಪ್ರಯಾಣಿಕರಿಗೆ ವೇಗದ ಸಾರಿಗೆಯ ಅಗತ್ಯವಿದ್ದು, ಟ್ರಾಮ್ ರೈಲುಗಳು ನಿಧಾನಗತಿಯಲ್ಲಿ ಸಂಚರಿಸುವುದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆಯುಂಟಾಗುತ್ತಿದೆ” ಎಂದು ಹೇಳಿದ್ದಾರೆ.

ಆದರೆ, ಸಾರಿಗೆ ಸಚಿವರ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿರುವ ಹಲವಾರು ಪ್ರಯಾಣಿಕರು, ರಸ್ತೆಗಳಲ್ಲಿನ ವಾಹನ ದಟ್ಟಣೆಗೆ ಟ್ರಾಮ್ ರೈಲುಗಳನ್ನು ದೂಷಿಸಲಾಗದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 24, 1873ರಲ್ಲಿ ಬ್ರಿಟಿಷರು ಹಳಿಯ ಮೇಲೆ ಕುದುರೆ ಎಳೆಯುವ ಕಾರಾಗಿ ಮೊದಲ ಬಾರಿಗೆ ಟ್ರಾಮ್ ರೈಲನ್ನು ಪರಿಚಯಿಸಿದ್ದರು. ನಂತರ ಈ ಟ್ರಾಮ್ ರೈಲುಗಳನ್ನು ಪಾಟ್ನಾ, ಚೆನ್ನೈ, ನಾಸಿಕ್ ಮತ್ತು ಮುಂಬೈಗಳಲ್ಲೂ ಪರಿಚಯಿಸಲಾಗಿತ್ತಾದರೂ, ಕಾಲಾಂತರದಲ್ಲಿ ಅವೆಲ್ಲ ಸ್ಥಗಿತಗೊಂಡಿದ್ದವು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News