×
Ad

Assam| ಸುಖೋಯ್-30 ಯುದ್ಧವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತ್ಯು : ದೃಢಪಡಿಸಿದ IAF

Update: 2026-03-06 10:29 IST

Photo | ndtv

ಗುವಾಹತಿ: ಅಸ್ಸಾಂನಲ್ಲಿ ಪತನವಾದ ಸುಖೋಯ್-30 ಯುದ್ಧವಿಮಾನದಲ್ಲಿದ್ದ ಇಬ್ಬರು ವಾಯುಪಡೆಯ ಪೈಲಟ್‌ಗಳು  ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಸ್ಸಾಂನ ಜೋರ್ಹಟ್ ನಿಂದ ಗುರುವಾರ ಸಂಜೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದ ಸುಖೋಯ್-30 ಯುದ್ಧವಿಮಾನ ಕರ್ಬಿ ಅಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿತ್ತು.

ಮೃತ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ.

ಪೈಲಟ್‌ಗಳ ನಿಧನಕ್ಕೆ ಐಎಎಫ್‌ ಸಂತಾಪ ವ್ಯಕ್ತಪಡಿಸಿದೆ. ಈ ದುಃಖದ ಸಮಯದಲ್ಲಿ ಮೃತ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News