×
Ad

ತೆಲಂಗಾಣ | ನೀಟ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

Update: 2025-05-06 12:17 IST

ಹೈದರಾಬಾದ್: ನೀಟ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಜಂಗಾ ಪೂಜಾ ಮತ್ತು ರಾಯೀ ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ.

ಜಗ್ತಿಯಾಲ್ ಜಿಲ್ಲೆಯ ಜಂಗಾ ಪೂಜಾ 2023 ರಲ್ಲಿ ಮೊದಲು ನೀಟ್ ಪರೀಕ್ಷೆ ಬರೆದಿದ್ದರು. ಆದರೆ ಅಪೇಕ್ಷಿತ ಫಲಿತಾಂಶಗಳನ್ನು ಬಂದಿರಲಿಲ್ಲ. ಇದರ ನಂತರ ಪರೀಕ್ಷೆಗೆ ಉತ್ತಮವಾಗಿ ತಯಾರಿ ನಡೆಸಲು ಅವರು ಕೋಚಿಂಗ್ ತರಗತಿಗೆ ಸೇರಿಕೊಂಡಿದ್ದರು. ರವಿವಾರ ಮೇ 4 ರಂದು ಮತ್ತೆ ಪರೀಕ್ಷೆಗೆ ಹಾಜರಾಗಿದ್ದರು.

ಒಮ್ಮೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಭಯ ಅವರನ್ನು ಕಾಡುತ್ತಿತ್ತು. ಮನೆಗೆ ಬಂದ ನಂತರ ಅವರು ತಾವು ಬರೆದಿದ್ದ ಉತ್ತರವನ್ನು ಅವರು ತಾಳೆ ಮಾಡಿದರು. ಈ ಬಾರಿಯೂ ಉತ್ತಮ ರ್ಯಾಂಕ್ ಪಡೆಯುವುದಿಲ್ಲ ಎಂದು ಭಾವಿಸಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿದು ಬಂದಿದೆ.

ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಮತ್ತೊಬ್ಬ ನೀಟ್ ಆಕಾಂಕ್ಷಿ ರಾಯೀ ಮನೋಜ್ ಕುಮಾರ್ ಕೂಡ ನೀಟ್ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದಿಲ್ಲ ಎಂದು, ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಶಿಕ್ಷಕಿಯೊಬ್ಬರ ಪುತ್ರನಾಗಿರುವ ಮನೋಜ್ ಹೈದರಾಬಾದ್‌ ನಲ್ಲಿ ನೀಟ್ ಕೋಚಿಂಗ್ ಪಡೆದಿದ್ದರು. ಪರೀಕ್ಷೆ ಬರೆದ ನಂತರ ಸೋಮವಾರ ಮನೆಗೆ ಹಿಂತಿರುಗಿದ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೇ 4 ರಂದು ನಡೆದ ನೀಟ್ ಪರೀಕ್ಷೆಗೆ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News