×
Ad

ರೈಲು ಟಿಕೆಟ್ ಬುಕ್ ಮಾಡುವ ವೇಳೆ ರಿಟರ್ನ್ ಟಿಕೆಟ್ ಮಾಡಿದರೆ 20 ಶೇ. ರಿಯಾಯಿತಿ!

Update: 2025-08-09 21:35 IST

PC : PTI 

ಹೊಸದಿಲ್ಲಿ, ಆ. 9: ಹೋಗುವ ಮತ್ತು ಬರುವ ಎರಡೂ ಟಿಕೆಟ್‌ ಗಳನ್ನು ಖರೀದಿಸುವ ಪ್ರಯಾಣಿಕರಿಗೆ ದರದಲ್ಲಿ 20 ಶೇಕಡ ರಿಯಾಯಿತಿ ನೀಡುವ ಯೋಜನೆಯೊಂದನ್ನು ರೈಲ್ವೇ ಇಲಾಖೆಯು ಶನಿವಾರ ಪರಿಚಯಿಸಿದೆ. ಈ ಯೋಜನೆಯನ್ನು ಆರಂಭದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಜಾರಿಗೊಳಿಸಲಾಗುವುದು.

ಈ ಯೋಜನೆಯಡಿ, ಕಾದಿರಿಸಲು ಸಾಧ್ಯವಿರುವ ಎಲ್ಲಾ ದರ್ಜೆಯ ಬೋಗಿಗಳ ಟಿಕೆಟ್‌ ಗಳನ್ನು ಕಾದಿರಿಸುವ ಪ್ರಕ್ರಿಯೆ ಆಗಸ್ಟ್ 14ರಂದು ಅರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಅಕ್ಟೋಬರ್ 13 ಮತ್ತು ಅಕ್ಟೋಬರ್ 26ರ ನಡುವೆ ಮುಮ್ಮುಖ ಪ್ರಯಾಣ ಮಾಡುವವರು ಟಿಕೆಟ್‌ ಗಳನ್ನು ಕಾದಿರಿಸಬಹುದಾಗಿದೆ. ಆದರೆ, ಈ ಯೋಜನೆಯು ರಾಜಧಾನಿ, ಡುರೊಂಟೊ ಮತ್ತು ಶತಾಬ್ದಿ ರೈಲುಗಳಿಗೆ ಅನ್ವಯಿಸುವುದಿಲ್ಲ.

ಈ ಯೋಜನೆಯಡಿ ಕಾದಿರಿಸಲಾಗುವ ಟಿಕೆಟ್‌ಗಳ ಹಣ ಮರುಪಾವತಿ ಮಾಡಲಾಗುವುದಿಲ್ಲ.

ಹಬ್ಬಗಳ ಋತುವಿನಲ್ಲಿ ಜನಸಂದಣಿಯನ್ನು ತಗ್ಗಿಸಲು, ಟಿಕೆಟ್‌ ಗಳನ್ನು ಸುಲಭವಾಗಿ ಕಾದಿರಿಸಲು ಸಾಧ್ಯವಾಗುವಂತಾಗಲು, ಜನಸಂದಣಿಯನ್ನು ಹಂಚಿಕೆ ಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ.

‘ರೌಂಡ್ ಟ್ರಿಪ್ ಪ್ಯಾಕೇಜ್’ ಎಂಬ ಹೆಸರಿನ ಯೋಜನೆಯಲ್ಲಿ, ಅಕ್ಟೋಬರ್ 13 ಮತ್ತು ಅಕ್ಟೋಬರ್ 26ರ ನಡುವೆ ಪ್ರಯಾಣ ಆರಂಭಿಸುವವರು ಕಾದಿರಿಸುವ ಟಿಕೆಟ್‌ ಗಳಿಗೆ 20 ಶೇಕಡ ರಿಯಾಯಿತಿ ನೀಡಲಾಗುತ್ತದೆ. ಈ ಯೋಜನೆಯಡಿ ಹಿಮ್ಮುಖ ಪ್ರಯಾಣವು ಅದೇ ರೈಲಿನಲ್ಲಿ ನವೆಂಬರ್ 17 ಮತ್ತು ಡಿಸೆಂಬರ್ 1ರ ನಡುವೆ ನಡೆಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News