×
Ad

ಮಧ್ಯಪ್ರದೇಶದ 205 ಶಾಸಕರು ಕೋಟ್ಯಾಧಿಪತಿಗಳು

Update: 2023-12-07 23:53 IST

ಭೋಪಾಲ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ 230 ಶಾಸಕರ ಪೈಕಿ 205 ಮಂದಿ ಕೋಟ್ಯಾಧಿಪತಿಗಳು. ಅತ್ಯಂತ ಶ್ರೀಮಂತಋಾಗಿರುವ ಮೂವರು ಶಾಸಕರಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಅವರು ಒಬ್ಬರಾಗಿದ್ದು, 134 ಕೋಟಿ ರೂ. ಮೌಲ್ಯದ ಸಂಪತ್ತಿಗೆ ಒಡೆಯರಾಗಿದ್ದಾರೆ. ಮಧ್ಯಪ್ರದೇಶದ ನೂತನ ಶಾಸಕರ ಸರಾಸರಿ ಸಂಪತ್ತಿನ ಮೌಲ್ಯ 11.77 ಕೋಟಿ ರೂ.ಗಳಾಗಿವೆ ಎಂದು ಪ್ರಜಾತಾಂತ್ರಿಕ ಸುಧಾರಣೆಗಳ ಸಂಘ (ಎಡಿಆರ್)ದ ವರದಿ ತಿಳಿಸಿದೆ.

ರತ್ಲಾಂ ನಗರ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಶಾಸಕ ಚೈತನ್ಯ ಕಶ್ಯಪ ಅವರು 296 ಕೋಟಿ ರೂ ಮೌಲ್ಯದ ಸಂಪತ್ತನ್ನು ಹೊಂದಿದ್ದು, ಆ ರಾಜ್ಯದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ. ಬಿಜೆಪಿಯ ಇನ್ನೋರ್ವ ಶಾಸಕ ಸಂಜಯ್ ಸತ್ಯೇಂದ್ರ ಪಾಠಕ್ (ವಿಜಯರಾಘವಗಡ ಕ್ಷೇತ್ರ), ಎರಡನೆ ಸ್ಥಾನದಲ್ಲಿದ್ದು, 242 ಕೋಟಿ ಆಸ್ತಿ ಹೊಂದಿದ್ದಾರೆ.

ಕೋಟ್ಯಾಧಿಪತಿ ಶಾಸಕರ ಪೈಕಿ 144 ಮಂದಿ ಬಿಜೆಪಿಯವರು ಹಾಗೂ 61 ಮಂದಿ ಕಾಂಗ್ರೆಸಿಗರು.

ಮಧ್ಯಪ್ರದೇಶದಲ್ಲಿ 1 ಕೋಟಿ ರೂ.ಗೂ ಅಧಿಕ ಸಂಪತ್ತನ್ನು ಹೊಂದಿರುವ ಶಾಸಕರ ಸಂಖ್ಯೆಯು 2018ರಲ್ಲಿ 187 ಇದ್ದರೆ, 2023ರಲ್ಲಿ ಅದು 205ಕ್ಕೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News