×
Ad

ದಿಲ್ಲಿ ವಿಮಾನ ನಿಲ್ದಾಣದಲ್ಲಿ 2 ದಿನಗಳಲ್ಲಿ 228 ವಿಮಾನಗಳ ಹಾರಾಟ ರದ್ದು

Update: 2025-05-09 21:16 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ, ವಾಯುಪ್ರದೇಶ ನಿರ್ಬಂಧಗಳು ಮುಂದುವರಿದಿವೆ. ಹಾಗಾಗಿ, ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸತತ ಎರಡನೇ ದಿನವೂ ಅವ್ಯವಸ್ಥೆ ನೆಲೆಸಿದ್ದು, ಭಾರೀ ಸಂಖ್ಯೆಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಮತ್ತು ವಿಳಂಬಿಸಲಾಗಿದೆ.

ಗುರುವಾರ ಜಮ್ಮು, ಪಂಜಾಬ್, ಗುಜರಾತ್ ಮತ್ತು ರಾಜಸ್ಥಾನದ ವಿವಿಧ ನಗರಗಳ ಮೇಲೆ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ.

ಕಳೆದ ಎರಡು ದಿನಗಳಲ್ಲಿ ದಿಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 228 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಶುಕ್ರವಾರ 138 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಗುರುವಾರ 90ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು ಹಾಗೂ 200ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ವಿಳಂಬಿಸಲಾಗಿತ್ತು.

►24 ವಿಮಾನ ನಿಲ್ದಾಣಗಳು ಬಂದ್

24 ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಗಳ ಹಾರಾಟವನ್ನು ಮೇ 10ರವರೆಗೆ ಸ್ಥಗಿತಗೊಳಿಸಲಾಗಿದೆ.

ಮುಚ್ಚಿರುವ ವಿಮಾನ ನಿಲ್ದಾಣಗಳೆಂದರೆ- ಅಮೃತಸರ, ಬಠಿಂಡ, ಭುಜ್, ಭುಂಟರ್, ಬಿಕಾನೆರ್, ಚಂಡೀಗಢ, ಹಲ್ವಾರ, ಹಿರಸ (ರಾಜ್‌ಕೋಟ್), ಜಮ್ಮು, ಜಾಮ್‌ನಗರ, ಜೈಸಲ್ಮೇರ್, ಜೋಧ್‌ಪುರ, ಕಾಂಗ್ರ-ಗಗ್ಗಲ್, ಕಾಂಡ್ರ, ಕೆಶೋಡ್, ಕಿಶನ್‌ಗಢ, ಲೆಹ್, ಲುಧಿಯಾನ, ಮುಂಡ್ರಾ, ಪಟಿಯಾಲ, ಪಠಾಣ್‌ಕೋಟ್, ಪೋರಬಂದರ್, ಶಿಮ್ಲಾ ಮತ್ತು ಶ್ರೀನಗರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News