×
Ad

ಜಮ್ಮು ವಿಮಾನ ನಿಲ್ದಾಣ, 3 ಸೇನಾ ನೆಲೆಗಳ ಮೇಲೆ ಪಾಕ್‌ ದಾಳಿ

Update: 2025-05-10 07:53 IST

PC | PTI

ಶ್ರೀನಗರ : ಪಾಕಿಸ್ತಾನ ಸೇನೆ ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಎರಡನೇ ಡ್ರೋನ್‌ ದಾಳಿ ನಡೆಸಿದೆ. ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಜಮ್ಮು ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸುವ ವಿಫಲ ಯತ್ನ ನಡೆಸಿದೆ.

ರಾತ್ರಿ 9ರ ಸುಮಾರಿಗೆ ಪಾಕಿಸ್ತಾನ ಸೇನೆ ಜಮ್ಮು ಮತ್ತು ನಗೋತ್ರಾ ಮೇಲೆ, ಜಮ್ಮು ವಿಮಾನ ನಿಲ್ದಾಣವನ್ನು ಗುರಿ ಮಾಡಿ ಡ್ರೋನ್‌ ದಾಳಿ ನಡೆಸಿದೆ. ಈ ಡ್ರೋನ್‌ ಗಳನ್ನು ಛೇದಿಸಿ ವಾಯು ರಕ್ಷಣಾ ವ್ಯವಸ್ಥೆ ಇವುಗಳನ್ನು ತಟಸ್ಥಗೊಳಿಸಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಮ್ಮು ಪ್ರದೇಶದಲ್ಲಿ ಕೆಂಪು ಗೆರೆಗಳು ಕಾಣಿಸಿಕೊಂಡಿದ್ದು, ಹಲವು ಕಡೆಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಭಾರತದ ರಕ್ಷಣಾ ವ್ಯವಸ್ಥೆ ಕಮಿಕಾಝ್ ಡ್ರೋನ್‌ ಗಳನ್ನು ತಟಸ್ಥಗೊಳಿಸಿವೆ. ಇದು ಸತತ ಎರಡನೇ ದಿನ ಜಮ್ಮು ಪ್ರದೇಶದಲ್ಲಿ ಪಾಕಿಸ್ತಾನ ನಡೆಸುವ ಡ್ರೋನ್‌ ದಾಳಿಯಾಗಿದೆ.

ಸಂಜೆಯಾಗುತ್ತಿದ್ದಂತೆ ಸೈರನ್‍ಗಳು ಮೊಳಗಿ ಇಡೀ ಪಟ್ಟಣದಲ್ಲಿ ಬ್ಲ್ಯಾಕೌಟ್ ಘೋಷಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಸಂಜೆಯಾಗುವ ಮುನ್ನ ಮುಚ್ಚುವ ಜೊತೆಗೆ ಜನರು ಮನೆಗಳಲ್ಲೇ ಉಳಿದು ದೀಪಗಳನ್ನು ಆರಿಸುವಂತೆ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News