×
Ad

ಗುಜರಾತ್: ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಮೃತ್ಯು

Update: 2023-11-15 10:53 IST

ಸಾಂದರ್ಭಿಕ ಚಿತ್ರ (PTI)

ಸೂರತ್: ಬಟ್ಟೆಗಳಿಗೆ ಬಣ್ಣ ಹಚ್ಚುವ ಘಟಕವೊಂದರಲ್ಲಿನ ಸೆಪ್ಟಿಕ್‌ ಟ್ಯಾಂಕ್ ಶುಚಿಗೊಳಿಸಲು ಟ್ಯಾಂಕ್‌ಗೆ ಇಳಿದಿದ್ದ ನಾಲ್ವರು ಕಾರ್ಮಿಕರು ವಿಷಾನಿಲ ಸೇವಿಸಿ ಮೃತಪಟ್ಟಿರುವ ಘಟನೆ ಸೂರತ್ ನ ಪಲ್ಸಾನ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಘಟನೆಯು ಮಂಗಳವಾರ ಸಂಜೆ ಪಲ್ಸಾನ-ಕಟೋದರ ರಸ್ತೆಯಲ್ಲಿನ ಕಾರ್ಖಾನೆಯೊಂದರಲ್ಲಿ ಸಂಭವಿಸಿದೆ.

ಸೆಪ್ಟಿಕ್‌ ಟ್ಯಾಂಕ್ ಶುಚಿಗೊಳಿಸುತ್ತಿದ್ದ ಇಬ್ಬರು ವಿಷಾನಿಲ ಸೇವಿಸಿ ಅಲ್ಲೇ ಪ್ರಜ್ಞಾಹೀನರಾಗಿದ್ದಾರೆ. ಅವರನ್ನು ರಕ್ಷಿಸಲು ಟ್ಯಾಂಕ್ ಗೆ ಇಳಿದ ಉಳಿದಿಬ್ಬರೂ ಪ್ರಜ್ಞಾಹೀನರಾಗಿದ್ದಾರೆ ಎಂದು ಪಲ್ಸಾನ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಲ್ಲ ನಾಲ್ವರನ್ನು ಟ್ಯಾಂಕ್ ನಿಂದ ಹೊರ ತೆಗೆದು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಮೃತ ಕಾರ್ಮಿಕರು ಬಿಹಾರ ಮೂಲದವರಾಗಿದ್ದು, ಅವರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News